Important
Trending

ನಾಯಿ ತಪ್ಪಿಸಲು ಹೋಗಿ ಅಪಘಾತ: ತಾಯಿ, ಮಗ ಗಂಭೀರ

ಸಿದ್ದಾಪುರ: ಪಿಕ್ ಅಪ್ ಹಾಗೂ ಆಟೋ ನಡುವೆ ಅಪಘಾತ ಸಂಭವಹಿಸಿ ಆಟೋ ಸವಾರರಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಹಲಗೇರಿ ಸಮೀಪದ ಕುಂಬಾರಕುಳಿಯಲ್ಲಿ ನಡೆದಿದೆ. ಸಿದ್ದಾಪುರ ಕಡೆಯಿಂದ ಜೋಗ ಕಡೆಗೆ ಹೋಗುತ್ತಿದ್ದ ಆಟೋಕ್ಕೆ ನಾಯಿ ಅಡ್ಡ ಬಂದಿದ್ದು, ನಾಯಿ ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಒಂದೇ ಕುಟುಂಬದ ಮೂವರು (ತಂದೆ ತಾಯಿ ಮಗ) ಪ್ರಯಾಣಿಸುತ್ತಿದ್ದರು. ತಾಯಿ ಹಾಗೂ ಮಗನಿಗೆ ಕಾಲು. ತಲೆಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ 108 ವಾಹನದ ಸಿಬ್ಬಂದಿಗಳಾದ ಧರ್ಮರಾಜ್, ರೀತಿಷ್ ಭೇಟಿ ನೀಡಿ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಾಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರುಗೆ ಒಯ್ಯಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button