Focus News
Trending

ಜಿಲ್ಲಾ ಉಸ್ತುವಾರಿ ಸಚಿವರಿಗೆ ಸನ್ಮಾನ ಮತ್ತು ಅಭಿನಂದನೆ: ಸಮಾರಂಭ ಹೊನ್ನಾವರ ಪಟ್ಟಣದ ಶರಾವತಿ ಕಲಾಮಂದಿರ ಪ್ರತಿಭೋದಯದಲ್ಲಿ ಆಯೋಜನೆ

ಕ್ರೈಸ್ತ ಸಮುದಾಯದವರಿಂದ ಸಚಿವ ಮಂಕಾಳ್ ವೈದ್ಯರಿಗೆ ಬೇಡಿಕೆ ಸಲ್ಲಿಕೆ

ಹೊನ್ನಾವರ: ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಡಿಯೆಸೆಜ್ ಆಫ್ ಕಾರವಾರ ಮತ್ತು ಉತ್ತರಕನ್ನಡ ಜಿಲ್ಲಾ ಕ್ರೈಸ್ತ ಸಂಘ -ಸಂಸ್ಥೆಗಳ ಒಕ್ಕೂಟ ಹೊನ್ನಾವರ ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ಹೊನ್ನಾವರ ಪಟ್ಟಣದ ಶರಾವತಿ ಕಲಾ ಮಂದಿರ ಪ್ರತಿಭೋದಯದಲ್ಲಿ ನಡೆಯಿತು. ಉಸ್ತುವಾರಿ ಸಚೀವರಾದ ಮಂಕಾಳು ಎಸ್. ವೈದ್ಯ ದೀಫ ಬೇಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಅಭಿನಂದನಾ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ . ನಾನು ಯಾವುದೇ ಕೆಲಸವನ್ನು ಮಾಡುವಾಗ ಧರ್ಮಗುರುಗಳ ಮಾತು ನೆನಪಾಗುತ್ತದೆ. ನಾನು ನುಡಿದಂತೆ ನಡೆಯುತ್ತಿದ್ದೇನೆ. ಗುರುಗಳು ನನಗೆ ಆಶೀರ್ವಾದ ಮಾಡಿದ್ದಾರೆ.ಬಡವರಿಗೆ ಸಹಾಯ ಮಾಡಿ ಅಂತಾ ಹೇಳಿದ್ದಾರೆ. ಮಾತಿನಂತೆ ಜನಸಾಮಾನ್ಯರ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರವಾರ ಧರ್ಮಪ್ರಾಂತ್ಯದ ಆಡಳಿತಾಧಿಕಾರಿಗಳಾದ ಬಿಷಪ್ ಡಾಕ್ಟರ್ ಡೆರೆಕ್ ಫರ್ನಾಂಡಿಸ್ ಮಾತನಾಡಿ, ಮಂಕಾಳ್ ವೈದ್ಯ ಒಳ್ಳೆಯ ಮಿತ್ರ. ಈ ಕಾರ್ಯಕ್ರಮ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ಅಷ್ಟೇ ಅಲ್ಲ ನಮ್ಮ ಪ್ರೀತಿಯ ಸಂಕೇತ ಎಂದರು. ಇದೇ ವೇಳೆ ಕ್ರೈಸ್ತ ಸಮುದಾಯದ ಬೇಡಿಕೆಯನ್ನು ಉಸ್ತುವಾರಿ ಸಚಿವರಿಗೆ ಸಲ್ಲಿಸಲಾಯಿತು, ಮತ್ತು ವಿವಿದ ಸಂಘ ಸಂಸ್ಥೆಯವರು, ಮುಕಂಡರು ಸನ್ಮಾನಿಸಿ ಗೌರವಿಸಿದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button