ಕಾರವಾರ: ಕೆಸರು ಗದ್ದೆಯಲ್ಲಿ ಓಟ, ಕ್ರೀಡಾ ಪಟುಗಳಿಗೆ ಹುರಿದುಂಬಿಸುತ್ತಿರುವ ಕ್ರೀಡಾಭಿಮಾನಿಗಳು.. ಆ ಊರಲ್ಲಿ ಕೆಸರು ಗದ್ದೆ ಕ್ರೀಡಾ ಕೂಟದಿಂದ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.. ಕರ್ನಾಟಕದ ಕರಾವಳಿ ಭಾಗದಲ್ಲಿ ಪೇಮಸ್ ಇರುವ ಕೆಸರು ಗದ್ದೆ ಕ್ರೀಡಾ ಕೂಟ ನೋಡುವುದೇ ಕಣ್ಣಿಗೆ ಹಬ್ಬ. ಹೌದು, (Rural Sports) ಸುತ್ತಲೂ ಹಸಿರಿನಿಂದ ಕಂಗೊಳಿಸೋ ಪ್ರದೇಶದಲ್ಲಿ ಹಸನುಗೊಳಿಸಿರೋ ಗದ್ದೆ. ಉತ್ಸಾಹದಿಂದ ಹಲವು ರೀತಿಯ ಕೆಸರಾಟಗಳಲ್ಲಿ ಭಾಗವಹಿಸೋ ಜನರು. ಕೆಸರಲ್ಲಿ ಓಡುವ, ಆಡುವ ಭರದಲ್ಲಿ ಬಿದ್ದೇಳುವ ಕ್ರಿಡಾಪಟುಗಳನ್ನು ನೋಡಿ ಉದ್ಗಾರ ಮಾಡುವ ಪ್ರೇಕ್ಷಕರು. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾರ್ಗಾ ಗ್ರಾಮದಲ್ಲಿ. ಯಸ್ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಅಂತಲೇ ಖಾರ್ಗಾ ಗ್ರಾಮ ಮದುವಣ ಗಿತ್ತಿಯಂತೆ ಸಜ್ಜು ಗೊಂಡಿತ್ತು..
Post Office Recruitment 2023: ಬೃಹತ್ ನೇಮಕಾತಿ: 1,714 ಹುದ್ದೆಗಳು: SSLC ಆದವರು ಅರ್ಜಿ ಸಲ್ಲಿಸಬಹುದು
ಒಂದು ಕಡೆ ಬಣ್ಣ ಬಣ್ಣದ ಬಟ್ಟೆ ತೊಟ್ಟು ಕ್ರೀಡೆ ನೋಡುತ್ತ ಯುವತಿಯರು ನಿಂತಿದ್ದರೆ, ಮತ್ತೊಂದು ಕಡೆ ಕೆಸರಲ್ಲಿ ಆಟಕ್ಕೆ ಇಳಿದ ಕ್ರೀಡಾಪಟುಗಳನ್ನ ಹುರಿದುಂಬಿಸುವ ಯುವ ಪಡೆ.. ಈ ಆಟ ನೋಡುವುದೆ ಕಣ್ಣಿಗೆ ಹಬ್ಬದ.. ಇನ್ನು ಈ ಕ್ರೀಡೆಯನ್ನ ಖಾರ್ಗಾ ಗ್ರಾಮಸ್ಥರು ಮತ್ತು ಪತ್ರಿಕಾ ನಿರ್ವಹಣ ಸಮಿತಿ ಆಯೋಜನೆ ಮಾಡಿತ್ತು..
ಹಳ್ಳಿಗಳಿಂದ ಜನರು ಪಟ್ಟಣದೆ ಕಡೆಗೆ ಆಕರ್ಷಿತರಾಗಿ ನೆಲೆಸಲು ತೆರಳುವುದರಿಂದ ನಿಜವಾದ ಹಳ್ಳಿಯ ಸೊಬಗನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರಲ್ಲಿ ಹಳ್ಳಿಯ ಸೋಗಡನ್ನ ಬಿಂಬಿಸುವ ಹಾಗೂ ನಶಿಸುತ್ತಿರುಗ ಗ್ರಾಮೀಣ ಕ್ರೀಡೆಗಳನ್ನು ಬೆಳೆಸುವ ಉದ್ದೇಶದಿಂದ ಮತ್ತೆ ಮತ್ತೆ ಇಂತಹ ಕ್ರೀಡಾಕೂಟವನ್ನು ಆಯೋಜನೆ ಮಾಡಬೇಕು ಎನ್ನುತ್ತಾರೆ ಜನ.
ಇನ್ನು ಕೆಸರು ಗದ್ದೆಯಲ್ಲಿ ಓಟ, ಹಗ್ಗ ಜಗ್ಗಾಟ, ಚಮಚದಲ್ಲಿ ಲಿಂಬೆ ಹಣ್ಣನ್ನಿಟ್ಟು ಓಡುವುದು, ಕೆಸರಲ್ಲಿ ವ್ಹಾಲಿಬಾಲ್ ಹೀಗೆ ಹಲವು ಗ್ರಾಮೀಣ ಆಟ ಗಳನ್ನು ಮಕ್ಕಳು, ಯುವತಿಯರು, ಮಹಿಳೆಯರು, ಪುರುಷರುಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಡಿಸಲಾಯಿತು. ಇದೇ ಮೊದಲಭಾರಿಗೆ ಇಂತಹ ಕ್ರೀಡಾಕೂಟ ಖಾರ್ಗಾದಲ್ಲಿ ಜರುಗಿದ್ದರಿಂದ ಉತ್ಸಾಹದಿಂದ ಪಾಲ್ಗೊಂಡ ಜನರು ಹೊಸ ಅನುಭವ ಪಡೆದರು.
ಅದರಲ್ಲೂ ಕೇವಲ ಮನೆಯಲ್ಲೇ ಇರುತ್ತಿದ ಇಲ್ಲಿನ ಮಹಿಳೆಯರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಂಜಾಯ್ ಮಾಡಿದ್ರು. ಇನ್ನು ಗ್ರಾಮೀಣ ಕ್ರೀಡೆ ( Rural Sports) ಗಳನ್ನ ಉತ್ತೇಜನ ಮಾಡುವ ದೃಷ್ಠಿಯಿಂದ ಈ ಕ್ರೀಡೆ ಆಯೋಜನೆ ಮಾಡಲಾಗಿದೆ ಎನ್ನುತ್ತಾರೆ ಆಯೋಜಕರು.. ಇದಷ್ಟೇ ಅಲ್ಲದೆ ಊರಿನ ಹಿರಿಯರಿಗೆ, ಮಾಜಿ ಸೈನಿಕರಿಗೆ ಸಾಧನೆಗೈದಿರೋ ಹಲವರಿಗೆ ಸನ್ಮಾನಿಸಿ ಅವರಿಗೆ ಗೌರವಿಸಲಾಯಿತು. ಇನ್ನು ಕ್ರೀಡೆಯನ್ನು ಬೆಳೆಸುವ ಹಾಗೂ ಗ್ರಾಮೀಣ ಭಾಗದ ಸೊಬಗನ್ನು ಇಂದಿನ ಪೀಳಿಗೆಗೂ ಪರಿಚಯಿಸುವ ದೃಷ್ಟಿಯಿಂದ ಕೆಸರುಗದ್ದೆ ಕ್ರೀಡಾಕೂಟ ಮಹತ್ವದ್ದೆನ್ನಿಸಿತು.
ವಿಸ್ಮಯ ನ್ಯೂಸ್, ಕಾರವಾರ