Big News
Trending

ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ:ಇಂದೇ ನಿಮ್ಮ ಮಕ್ಕಳ ಹೆಸರು ನೋಂದಾಯಿಸಿಕೊಳ್ಳಿ

Pradhan Mantri Rashtriya Bal Puraskar

ಕಾರವಾರ: ಕ್ರೀಡೆ, ಕಲೆ, ನಾವಿನ್ಯತೆ, ತಾರ್ಕಿಕ ಸಾಧನೆಗಳು ಸೇರಿದಂತೆ ಅಸಾಧಾರಣ ಸಾಧನೆ ಮಾಡಿದ 5 ರಿಂದ 18 ವರ್ಷ ವಯೋಮಾನದ ಮಕ್ಕಳನ್ನು ಗುರುತಿಸಿ 2023 ನೇ ಸಾಲಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು( Pradhan Mantri Rashtriya Bal Puraskar) ನೀಡಲಾಗುತ್ತಿದೆ. ಕಾರಣ ಈ ಜಿಲ್ಲೆಯಲ್ಲಿ ನೆಲೆಸಿರುವ ಮತ್ತು ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವ 5 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: 63 ಹುದ್ದೆಗಳ ನೇಮಕಾತಿ: 90 ಸಾವಿರ ವೇತನ:Apply Now

ದಿನಾಂಕ: 01-08- 2005 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2023 ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ( Pradhan Mantri Rashtriya Bal Puraskar) ಗೆ ಅರ್ಜಿ ಸಲ್ಲಿಸಬಯಸುವವರು ತಮ್ಮ ಅರ್ಜಿಯನ್ನು ನೇರವಾಗಿ ಆನ್‌ಲೈನ್ ಪೋರ್ಟಲ್ https://awards.gov.in ಮೂಲಕ ಆಗಸ್ಟ್ 31 ರೊಳಗೆ ನೊಂದಾಯಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button