Follow Us On

Google News
Focus News
Trending

ಹಿರೇಗುತ್ತಿ ಹೈಸ್ಕೂಲಿಗೆ ಶ್ರೀದೇವಿ ಹಳ್ಳೇರ ಪ್ರಥಮ: ಶೇ. 91.36

ಕುಮಟಾ: ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘ ಹಿರೇಗುತ್ತಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ 2020ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಗಮನಾರ್ಹವಾಗಿದೆ. ಶಾಲೆಯ ಫಲಿತಾಂಶ ಶೇ. 84.04 ಆಗಿರುತ್ತದೆ. ಶ್ರೀದೇವಿ ಎಸ್ ಹಳ್ಳೇರ ಪ್ರಥಮ 91.36%, ಶಿವರಾಜ ಯೋಗೇಶ ನಾಯಕ ದ್ವಿತೀಯ 84.48%, ತೃತೀಯ ಶಿವರಂಜಿನಿ ಬಿ ಗೌಡ 83.04%, ಹಾಗೂ ನವ್ಯಶ್ರೀ ಎಮ್ ನಾಯಕ 83.04% ಪಡೆದಿದ್ದು ಶಾಲೆಗೆ ಕೀರ್ತಿ ತಂದಿರುತ್ತಾರೆ. 94 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು ಅದರಲ್ಲಿ 79 ವಿದ್ಯಾರ್ಥಿಗಳು ಪಾಸಾಗಿದ್ದಾರೆ.


ಈ ಶೈಕ್ಷಣಿಕ ಸಾಧನೆಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್.ನಾಯಕ ಆಡಳಿತ ಕಮೀಟಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ , ಕಾರ್ಯದರ್ಶಿ ಮೋಹನ ಬಿ ಕೆರೆಮನೆ ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ, ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷರಾದ ರಾಜು ಕೇ ಗಾಂವಕರ, ಹಾಗೂ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ಹಾಗೂ ಶಿಕ್ಷಕ/ಶಿಕ್ಷಕೇತರ ವೃಂದದವರು ಹಾಗೂ ಊರನಾಗರಿಕರು ಅಭಿನಂದನೆ ಸಲ್ಲಿಸಿದಾರೆ.

ಹಿರೇಗುತ್ತಿ ಹೈಸ್ಕೂಲ್ ಪ್ರಥಮ: ಶ್ರೀದೇವಿ ಶಂಕರ ಹಳ್ಳೇರ ಸನ್ಮಾನ
ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ವಿದ್ಯರ‍್ಥಿನಿ ಕುಮಾರಿ ಶ್ರೀದೇವಿ ಶಂಕರ ಹಳ್ಳೇರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 91.36 ಫಲಿತಾಂಶ ಪಡೆದು ಹೈಸ್ಕೂಲ್ ಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಹಳ್ಳೇರ ಸಮಾಜಕ್ಕೆ ಕರ‍್ತಿ ತಂದಿದ್ದಾಳೆ ಅವಳ ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಲು ಬಿ.ಜೆ.ಪಿ ಪಕ್ಷದ ಮುಖಂಡರಾದ ರಾಮು ಕೆಂಚನ್ ಹಿರೇಗುತ್ತಿ ರವರು ಅವರ ಮನೆಗೆ ಹೋಗಿ ಮೊರಬಾ ಹಳ್ಳೇರ ಸಮಾಜ ಬಾಂಧವರ ಸಮ್ಮುಖದಲ್ಲಿ ಶಾಲು ಹೊದಿಸಿ ಫಲ ಪುಷ್ಪ ಗಳೊಂದಿಗೆ ಸನ್ಮಾನಿಸಿ ಶ್ರೀದೇವಿಯ ಭವಿಷ್ಯದ ಜೀವನದಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ಸಾಧನೆ ಮಾಡುವಂತಾಗಲಿ ಅವಳಿಗೆ ಯಾವತ್ತೂ ನಮ್ಮ ಸಹಕಾರ ಪ್ರೋತ್ಸಾಹ ಇದೆ ಎಂದಿದ್ದಾರೆ.


ವಿಸ್ಮಯ ನ್ಯೂಸ್, ಕುಮಟಾ

Back to top button
Idagunji Mahaganapati Chandavar Hanuman