Focus News
Trending

Shravana Shanivara; ಶ್ರಾವಣ ಶನಿವಾರದ ನಿಮಿತ್ತ ದೊಡ್ಡ ದೇವರಸನ್ನಿಧಿಯಲ್ಲಿ ವಿಶೇಷ ಪೂಜೆ

ಅನ್ನಪೂರ್ಣ ಸಹಕಾರಿಯ ಸಹೋದರರಿಂದ ಅನ್ನಸಂತರ್ಪಣೆ

ಅಂಕೋಲಾ: ದೊಡ್ಡ ದೇವರೆಂದೇ ಪ್ರಸಿದ್ಧಿಯಾಗಿರುವ ಶ್ರೀವೆಂಕಟರಮಣ ದೇವಾಲಯದಲ್ಲಿ ಶ್ರಾವಣ ಮಾಸದ 2 ನೇ ಶನಿವಾರದ (Shravana Shanivara) ಪ್ರಯುಕ್ತ, ಯುವ ಉದ್ದಿಮೆದಾರ ಸಹೋದರರಾದ ,ಅನ್ನಪೂರ್ಣ ಕ್ರೆಡಿಟ್ ಕೋ ಆಪ್ . ಸೌಹಾರ್ದ ಸಹಕಾರಿಯ ಅಧ್ಯಕ್ಷ ಮಂಜುನಾಥ ನಾಯಕ, ಉಪಾಧ್ಯಕ್ಷ ಗೋಪು ನಾಯಕ ಅಡ್ಲೂರ ಇವರ ಕುಟುಂಬದವರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಶ್ರೀವೆಂಕಟರಮಣ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ (Shravana Shanivara) ಸಲ್ಲಿಸಿ ನಡೆಸಲಾದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದಿಂದ ಬಹುದೂರದ ವರೆಗೆ ಸರತಿ ಸಾಲು ಕಂಡು ಬಂತು. ಮಳೆಯ ಬಿಡುವು, ಶನಿವಾರದ ಸಂತೆ, ಮತ್ತಿತರ ಕಾರಣಗಳಿಂದ ಭಕ್ತರ ಜನಜಂಗುಳಿ ಕಂಡುಬಂತು. ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರಾದ ಮಯೂರ ನಾಯಕ ಸೇರಿದಂತೆ ಹಲವು ಗಣ್ಯರು , ಪ್ರಮುಖರಿದ್ದರು. ಅಡ್ಲೂರ ಮಂಜು ಮತ್ತು ಗೋಪು ಕುಟುಂಬ ವರ್ಗದವರು, ಆಪ್ತರು, ಗೆಳೆಯರ ಬಳಗ ಮತ್ತು ಸ್ವಯಂ ಸೇವಕರು ಅನ್ನಪ್ರಸಾದ ವಿತರಿಸಿದರು.ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು, ಸಿಬ್ಬಂದಿಗಳು,ಅರ್ಚಕರು, ಭಕ್ತಾದಿಗಳು , ಇತರೆ ಪ್ರಮುಖರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button