Follow Us On

WhatsApp Group
Focus News
Trending

ಸಪ್ಟೆಂಬರ್ 3 ರಂದು ಅರಣ್ಯವಾಸಿಗಳ ಸಭೆ

ಕುಮಟ: ತಾಲೂಕ ಅರಣ್ಯವಾಸಿಗಳ ಸಭೆಯನ್ನ ಸಪ್ಟೆಂಬರ್ 3, ಬಾನುವಾರ ಮುಂಜಾನೆ 10:30 ಕ್ಕೆ ಕುಮಟ ಬಸ್‌ಸ್ಟಾಂಡ್ ಸರ್ಕಲ್ ಹತ್ತಿರ ಇರುವ ಮಹಾಸತಿ ದೇವಾಲಯದ ಸಭಾಂಗಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯವಾಸಿಗಳಿಗೆ ಗುರುತಿನ ಪತ್ರ( ಐಡಿ ಕಾರ್ಡ)ವಿತರಿಸುವುದು, ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿನ ಪೋಟೋ ಪ್ರದರ್ಶನದ ( ಬೆಂಗಳೂರಿನಲ್ಲಿ ಸಪ್ಟೆಂಬರ್ 14 ರಂದು ನಡೆಯುವ) ಕುರಿತು ಚರ್ಚಿಸುವುದು, ಅರಣ್ಯ ಹಕ್ಕು ಮಂಜೂರಿ ಕುರಿತು ರಾಜ್ಯ ಸರಕಾರದ ಸಂಬoಧಿಸಿದ ಹಿರಿಯ ಸಚಿವರೊಂದಿಗೆ ಸಂವಾದ ಏರ್ಪಡಿಸುವ ಕುರಿತು, ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವ ಮಂಕಾಳ ವೈಧ್ಯರೊಂದಿಗೆ ಚರ್ಚಿಸುವ ಕುರಿತು ಸಭೆಯಲ್ಲಿ ತಿಳಿಸಲಾಗುವುದೆಂದು ಹಾಗೂ ಆಸಕ್ತರು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.

Back to top button