Focus News
Trending

Shri Bharati English Medium School Kavalakki: ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ

ಹೊನ್ನಾವರ : ಇತ್ತೀಚಿಗೆ ಜರುಗಿದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ (Shri Bharati English Medium School Kavalakki) ವಿದ್ಯಾರ್ಥಿಗಳು ವಿಜೇತರಾಗಿ ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರ ಸಾಧನೆಯನ್ನು ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ ಅಬ್ಳಿ , ಗೌರವಾಧ್ಯಕ್ಷರಾದ ಶ್ರೀ ವಿ.ಜಿ ಹೆಗಡೆ ಗುಡ್ಗೆ, ಆಡಳಿತಾಧಿಕಾರಿ ಶ್ರೀ ಎಮ್.ಎಸ್. ಹೆಗಡೆ ಗುಣವಂತೆ, ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್, ಸಿಬ್ಬಂದಿ ವರ್ಗ ಹಾಗೂ ಪಾಲಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

(Shri Bharati English Medium School Kavalakki) ಪ್ರೌಢಶಾಲಾ ವಿಭಾಗದಲ್ಲಿ ಮನೋಜ್ ಭಟ್ ಯೋಗಾಸನದಲ್ಲಿ ಪ್ರಥಮ, ಭಾವಗೀತೆಯಲ್ಲಿ ದ್ವಿತೀಯ, ದೀಕ್ಷಾ ಹೆಗಡೆ ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ, ಜೊಸ್ಲೀನ್ ಲೋಪಿಸ್ ಇಂಗ್ಲೀಷ್ ಭಾಷಣ ದ್ವಿತೀಯ, ಹಫಿಲಾ ಹೈಫಾ ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ, ಹಫಿಲಾ ಹೈಪಾ ಮತ್ತು ಸಂಗಡಿಗರು ಕವಾಲಿಯಲ್ಲಿ ದ್ವಿತೀಯ, ನೇಹಾ ನಾಯ್ಕ ಮತ್ತು ಸಂಗಡಿಗರು ಜಾನಪದ ನೃತ್ಯದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಾಥಮಿಕ ವಿಭಾಗದಲ್ಲಿ ಪೃಥ್ವಿ ಹೆಗಡೆ ಧಾರ್ಮಿಕ ಪಠಣ ಪ್ರಥಮ, ಶ್ರೇಯಸ್ ಮೇಸ್ತ ಲಘು ಸಂಗೀತ ಪ್ರಥಮ, ನಾಗಶ್ರೀ ಭಟ್ ಚಿತ್ರಕಲೆ ಪ್ರಥಮ, ಪ್ರಿಸ್ಟೊನ್ ಲೋಪಿಸ್ ಇಂಗ್ಲೀಷ್ ಕಂಠಪಾಠ ದ್ವಿತೀಯ, ಎಸ್ ಶೃಂಗ ಕಥೆ ಹೇಳುವುದು ದ್ವಿತೀಯ, ಪ್ರಥಮ ಭಟ್ ಲಘು ಸಂಗೀತ ಮತ್ತು ಭಕ್ತಿ ಗೀತೆ ದ್ವಿತೀಯ, ಚಿಂತನ್ ಬಿ ಚಿತ್ರಕಲೆ ದ್ವಿತೀಯ, ಜೋಶ್ವಾ ಡಾಯಸ್ ಕ್ಲೇ ಮೊಡಲಿಂಗ್ ದ್ವಿತೀಯ, ಗುರುಪ್ರೀತ್ ಮಡಿವಾಳ ಛದ್ಮವೇಷ ದ್ವಿತೀಯ, ರೋಹನ್ ಕಿಣಿ ಹಿಂದಿ ಕಂಠಪಾಠ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರ ಸಾಧನೆಯನ್ನು ಪ್ರಶಂಸಿಸಲಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button