Big News
Trending

Musical Program: ಎದೆತುಂಬಿ ಹಾಡುವೆನು ಖ್ಯಾತಿಯ ಕಲಾವಿದರಿಂದ ಶ್ರಾವಣ ಸಂಗೀತ ಕಾರ್ಯಕ್ರಮ

ಅಂಕೋಲಾ: ಸಂಗಮ ಸೇವಾ ಸಂಸ್ಥೆ ಅಂಕೋಲಾ ಇವರ ಆಶ್ರಯದಲ್ಲಿ ಅಂಕೋಲೆಯ ಉದಯೋನ್ಮುಖ ಗಾಯಕಿಯರಾದ ಖಾಸಗಿ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿಯ ಕಲಾವಿದ ಸಹೋದರಿಯರಾದ ದರ್ಶಿನಿ ಶೆಟ್ಟಿ ಮತ್ತು ವರ್ಷಿಣಿ ಶೆಟ್ಟಿ ಅವರಿಂದ ಶ್ರಾವಣ ಸಂಗೀತ (Musical Program) ಕಾರ್ಯಕ್ರಮ ನಡೆಯಿತು. ಅಂಕೋಲಾದ ಕೇಣಿಯ ಡಾ.ವೆಂಕಟೇಶ ಕೇಣಿಕರ್ ಮನೆಯಂಗಳದಲ್ಲಿ ಶ್ರಾವಣ ಸಂಗೀತ ಎಂಬ ಸರಳ ಸುಂದರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೆನರಾ ವೆಲಫರ್ ಟ್ರಸ್ಟ್ ಧರ್ಮದರ್ಶಿ ಕೃಷ್ಣಾನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಕ್ತಿ ಸಂಗೀತದಲ್ಲಿ ಒಂದು ಧನಾತ್ಮಕ ಶಕ್ತಿ ಇದ್ದು ಶ್ರಾವಣ ಮಾಸದಲ್ಲಿ ಇಂಥ ಕಾರ್ಯಕ್ರಮಗಳ (Musical Program) ಆಯೋಜನೆ ಅರ್ಥಪೂರ್ಣ ಎಂದರು. ಮುಖ್ಯ ಅತಿಥಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಿಜಯದೀಪ ಮಾತನಾಡಿ ಯೋಗ, ಧ್ಯಾನ ಮತ್ತು ಗಾನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದಾಕಾಲ ಆರೋಗ್ಯವಂತರಾಗಿ ಬದುಕಬಹುದು ಮಾನಸಿಕ ಆರೋಗ್ಯಕ್ಕೆ ಸಂಗೀತ ಕೇಳಿಸಿ ಚಿಕಿತ್ಸೆ ನೀಡುತ್ತಿರುವುದನ್ನು ನೋಡಬಹುದಾಗಿದೆ ಎಂದರು.

ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ ದರ್ಶನಿ ಮತ್ತು ವರ್ಷಿಣಿ ಸಹೋದರಿಯರು ಸಂಗೀತ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ ಎಂದರು. ವಿಶೇಷ ಆಮಂತ್ರಿತ ಎಲ್. ಕೆ.ನಾಯ್ಕ ಮಾತನಾಡಿದರು. ವಿಶ್ರಾಂತ ವೈದ್ಯ ಡಾ.ವೆಂಕಟೇಶ ಕೇಣಿಕರ್ ಅಧ್ಯಕ್ಷತೆ ವಹಿಸಿದ್ದರು. ಸಂಗಮ ಸೇವಾ ಸಂಸ್ಥೆ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನೂರಾರು ಸಂಗೀತಾಸಕ್ತರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button