Focus News
Trending

ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟ: ವಾಲಿಬಾಲ್ ಪಂದ್ಯಾವಳಿಯಲ್ಲಿ ವಿದ್ಯಾರ್ಥಿನಿಯರ ಸಾಧನೆ

ಕುಮಟಾ: ಕುಮಟಾ ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈ ಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೊನ್ನಾವರ ತಾಲೂಕಿನ ಗುಂಡಬಾಳಾದ ಆರೋಗ್ಯ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿನಿಯರಾದ ಯಶಸ್ವಿನಿ ನಾಯ್ಕ, ಭಾಗ್ಯಶ್ರೀ ಅಚಾರಿ, ಯಶಸ್ವಿ ನಾಯ್ಕ, ರಿತಿಷಾ ಫರ್ನಾಂಡಿಸ್. ವಿನುತಾ ನಾಯ್ಕ, ತನುಶ್ರೀ ನಾಯ್ಕ, ಸುಪ್ರಿತಾ ಶೇಟ್, ಕೃಪಾ ನಾಯ್ಕ, ಶಿವಾನಿ ಶೇಟ್, ಸುಮತಿ ಗೌಡ, ರಶ್ಮಿ ಗೌಡ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ. ಸಿ . ಡಿ. ಗೊನ್ಸಾಲ್ವಿಸ್ ಇವರನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ವಂದನೀಯ ಫಾII ವಲೇರಿಯನ್ ಸಿಕ್ವೇರಾ, ಶಾಲಾ ಸಂಚಾಲಕರಾದ ವಂ.ಫಾII ಥೋಮಸ್ ಫರ್ನಾಂಡಿಸ್, ಮುಖ್ಯಾಧ್ಯಾಪಕರಾದ ಶ್ರೀ ವಿಲ್ಸನ್ ಲುಯಿಸ್ ಹಾಗೂ ಶಾಲಾ ಶಿಕ್ಷಕ ವೃಂದದವರು ಅಭಿನಂದಿಸಿ ವಿಭಾಗೀಯ ಮಟ್ಟಕ್ಕೆ ಶುಭ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button