ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆ
ವಾರದ ಹಿಂದೆ ಕೂಡಾ ಇದೇ ರೀತಿಯ ತಿಮಿಂಗಿಲದ ಮೃತದೇಹ ಪತ್ತೆಯಾಗಿತ್ತು

ಹೊನ್ನಾವರ: ತಾಲೂಕಿನ ಟೊಂಕಾ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಮೃತ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ. ಹೌದು, ಇಲ್ಲಿ ಟೊಂಕಾ ಅರಬ್ಬಿ ಸಮುದ್ರದ ದಡದಲ್ಲಿ ಭಾರೀ ಗಾತ್ರದ ತಿಮಿಂಗಿಲದ ಶವ ಶನಿವಾರ ಮುಂಜಾನೆ ಪತ್ತೆಯಾಗಿದೆ. ದೇಹದ ಭಾಗಗಳು ಕೊ-ಳೆತು ಹೋಗಿದ್ದು, ಬಾರಿಗಾತ್ರ ಹೊಂದಿದೆ. ಕಳೆದ ಒಂದು ವಾರದ ಹಿಂದೆ ಗುಣವಂತೆ ಮುಗಳಿ ಸಮೀಪ ಕೊ-ಳೆತ ರೀತಿಯಲ್ಲಿ ಇದೇ ರೀತಿಯ ತಿಮಿಂಗಿಲದ ಮೃತದೇಹ ಪತ್ತೆಯಾಗಿತ್ತು. ಇದೀಗ ಇನ್ನೋಂದು ತಿಮಿಂಗಿಲಿದ ಕಳೆಬರಹ ಟೊಂಕಾ ಸಮೀಪ ಪತ್ತೆಯಾಗಿದೆ,
ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀಗಾತ್ರದ ಮೀನಿನ ದೇಹವನ್ನು ಕಂಡ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದು, ಮೃತ ತಿಮಿಂಗಿಲದ ದೇಹವನ್ನು ಸಮುದ್ರದ ದಡದಲ್ಲಿ ಹೂಳುವ ತಯಾರಿ ನಡೆದಿದೆ. ಮರಣೋತ್ತರ ಪರಿಕ್ಷೆ ವರದಿ ಬಳಿಕ ನೈಜ ಕಾರಣ ತಿಳಿಯಲಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ವಿದ್ಯಾಧರ್ ನಾಯ್ಕ, ಕಡತೋಕಾ