Focus News
Trending

Lorry: ಹೆದ್ದಾರಿ ಅಂಚಿಗೆ ಹೊರಳಿ ನೀರು ಹೋಗುವ ಮೋರಿ ಮೇಲೆ ಅಂಗಲಾಚಿ ಮಲಗಿದ ಲಾರಿ

ಮೋರಿಯ ಮೇಲೆ ಪಲ್ಟಿಯಾದ ಘಟನೆ ಅಮದಳ್ಳಿಯಲ್ಲಿ ಸಂಭವಿಸಿದೆ. ಗೋವಾ ಕಡೆಯಿಂದ ಬೆಂಗಳೂರು ಕಡೆ ಪೇಪರ್ ರೋಲ್ ನಂತ ಸರಕು ತುಂಬಿ ಸಾಗಿಸುತ್ತಿತ್ತು ಎನ್ನಲಾದ ಲಾರಿ ದಾರಿಮಧ್ಯೆ ಅಮದಳ್ಳಿ ಹೆದ್ದಾರಿಯಲ್ಲಿ ನಸುಕಿನ ಜಾವ ಈ ಘಟನೆ ನಡೆದಿದೆ. . ಅದಾವುದೋ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ , ಲಾರಿಯ ಚಕ್ರಗಳು ಹೆದ್ದಾರಿ ಅಂಚಿಗೆ ಇಳಿದು, ಲಾರಿ ಎಡಮಗ್ಗುಲಿಗೆ ಹೊರಳಿ ನೀರು ಹರಿದು ಹೋಗಲು ನಿರ್ಮಿಸಿದ ದೊಡ್ಡ ಮೋರಿಯ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ಪಕ್ಕದ ಜಾಗದಲ್ಲಿ ಪಲ್ಟಿಯಾಗಿದೆ.

ಈ ಆಕಸ್ಮಿಕ ರಸ್ತೆ ಅವಘಡದಿಂದ ವಾಹನದ ಮುಂಭಾಗ ಮತ್ತಿತರ ಭಾಗ ಜಖಂ ಗೊಂಡಿದ್ದು, ಲಾರಿ ಚಾಲಕ ಶಿವಕುಮಾರ ಕೆ. ಎಮ್. ಎಂಬುವವರಿಗೆ ಚಿಕ್ಕಪುಟ್ಟ ಗಾಯ ನೋವುಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದಿರುವ ಆಯ್ ಆರ್ ಬಿ ಯ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದಲೂ ಹೆದ್ದಾರಿ ಅಪಘಾತಗಳು ಹೆಚ್ಚುವಂತಾಗಿವೆ ಎನ್ನುವ ಮಾತು ಸ್ಥಳೀಯರಿಂದ ಕೇಳಿ ಬಂದಿದೆ.

ಕಾರವಾರದ ಹೆದ್ದಾರಿ ಗಸ್ತು ವಾಹನ (HRP) ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಕುರಿತು ಕಾರವಾರ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು , ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button