ಯಶಸ್ವಿಯಾಗಿ ಮೋತಿಬಿಂದು ಶಸ್ತ್ರಚಿಕಿತ್ಸೆ ಯನ್ನು ಉಚಿತವಾಗಿ ಪೂರೈಸಿಕೊಂಡ ಗೋಕರ್ಣ & ಅಂಕೋಲಾದ 18 ಫಲಾನುಭವಿಗಳು

ಕುಮಟಾ: ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಆಸ್ಪತ್ರೆಯ ಬಸ್ ಮೂಲಕ ತಮ್ಮ ತಮ್ಮ ಮನೆಗಳಿಗೆ ಕೃತಜ್ಙತಾ ಭಾವದೊಂದಿಗೆ ವಾಪಸ್ಸಾಗುತ್ತಿರುವ ಸಂದರ್ಭದಲ್ಲಿನ ಗ್ರೂಪ್ ಫೊಟೊ ಒಂದರಲ್ಲಿ ಆಸ್ಪತ್ರೆಯ ನೇತ್ರತಜ್ಙರು,ಆಡಳಿತಾಧಿಕಾರಿ ಗಳು,ಸಿಬ್ಬಂದಿಗಳೊಂದಿಗೆ ಶ್ರೀಮತಿ ಚೂಡಾಮಣಿ ಆರ್. ಪಟಗಾರ ಮತ್ತು ಶ್ರೀ ಆರ್.ಎನ್.ಪಟಗಾರ (ನಿವೃತ್ತ ಎ.ಇ.ಇ.ಹೆಸ್ಕಾಂ.)ದಂಪತಿ ಕುಮಟಾ ರವರು ಪಾಲ್ಗೊಂಡು ಶುಭ ಕೋರಿ, ಈವರೆಗೂ 8000 ಕ್ಕೂ ಅಧಿಕ ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆ ಗಳನ್ನು ಪೂರೈಸಿಕೊಟ್ಟು, ಪ್ರತೀ ಗುರುವಾರ ಉಚಿತ ಕ್ಯಾಂಪ ಮೂಲಕ ಯಶಸ್ವಿಯಾಗಿ ಈ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿರುವ ಮಾಹಿತಿಯನ್ನು ಪಡೆದು ಕುಮಟಾದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ನವೀಕೃತ ಕಟ್ಟಡ, ಅಧುನಿಕ ಯಂತ್ರೋಪಕರಣಗಳೊಂದಿಗೆ ನೀಡುತ್ತಿರುವ ಸೇವಾ ಕಾರ್ಯಚಟುವಟಿಕೆಗಳ ಕುರಿತಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version