Follow Us On

WhatsApp Group
Important
Trending

ಬಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕುಮಟಾ: ಅಪ್ರಾಪ್ತ ಬಾಲಕನ ಮೇಲೆ 25 ವರ್ಷದ ಯುವಕ ಲೈಂಗಿನ ದೌರ್ಜನ್ಯ ಎಸಗಿದ ಘಟನೆ ಕುಮಟಾ ಪಟ್ಟಣದ ಮಸೀದಿಯೊಂದರಲ್ಲಿ ನಡೆದಿದೆ. ಮಸೀದಿ ಮೌಲ್ವಿ ಪಶ್ಚಿಮ ಬೆಂಗಾಳ ಉತ್ತರ ದಿನಾಜಪುರದ ಅಬ್ದುಸ್ ಸಮದ್ ಜಿಯಾಯಿ ಎಂಬಾತನೆ ಅಪ್ರಾಪ್ತ ಬಾಲಕನ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ ಆರೋಪಿ. ಕುರಾನ್ ಓದಲು ಬಂದಿದ್ದ ಅಪ್ರಾಪ್ತ ಯುವಕ ಮೇಲೆ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಲೈಂಗಿನ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Bank Recruitment 2023: ಉದ್ಯೋಗಾವಕಾಶ: 600 ಹುದ್ದೆಗಳಿಗೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ: Apply Now

ಈ ಕುರಿತಾಗಿ ಲೈಂಗಿನ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಬಾಲಕನ ಪಾಲಕರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ. ನ್ಯಾಯಾಧೀಶರು  ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Google News ನಲ್ಲಿ ವಿಸ್ಮಯ ಟಿವಿಯನ್ನು ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ.  

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button