Follow Us On

WhatsApp Group
Important
Trending

Neelgod Temple: ಸುವರ್ಣ ಚಾತುರ್ಮಾಸ್ಯ ವೃತಾಚರಣೆ ಮುಕ್ತಾಯ ಸಮಾರಂಭ: ನೀಲಗೋಡ ಯಕ್ಷೀ ಚೌಡೇಶ್ವರಿ ದೇವಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮ

ಹೊನ್ನಾವರ: ರಾಜ್ಯದ ಪ್ರಸಿದ್ಧ ದೇವಿ ಕ್ಷೇತ್ರದಲ್ಲಿ ಒಂದಾದ ಹೊನ್ನಾವರದ ನೀಲಗೋಡ (Neelgod Temple) ಶ್ರೀ ಯಕ್ಷೀ ಚೌಡೇಶ್ವರಿ ದೇವಿ ದೇವಾಲಯದಲ್ಲಿ ಆಂಧ್ರಪ್ರದೇಶದ ಯಾದವಗಿರಿ ಅದೋನಿ ಶಂಕರಾನoದ ಸರಸ್ವತಿ ಮಹಾಸಂಸ್ಥಾನ ಮಠದ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಮಹಾ ಸ್ವಾಮಿಗಳು 50 ನೇ ವರ್ಷದ ಚಾತುರ್ಮಾಸ್ಯದಲ್ಲಿ ನಿರತರಾಗಿದ್ದರು. ಇದೀಗ ಸ್ವಾಮೀಗಳ ಸುವರ್ಣ ಚಾತುರ್ಮಾಸ್ಯ ವೃತಾಚರಣೆ ಮುಕ್ತಾಯ ಸಮಾರಂಭ ದೇವಾಲಯದಲ್ಲಿ ನಡೆಯಿತು.

ಸ್ವಾಮೀಜಿಯವರ ಸುವರ್ಣ ಚಾತುರ್ಮಾಸ್ಯ ವೃತಾಚರಣೆ ಮುಕ್ತಾಯ ಸಮಾರಂಭಕ್ಕೆ ಹಾವೇರಿ ಜಿಲ್ಲೆಯ ಅಂಕಸಾಪುರದ ಶಿವಾನಂದಾಶ್ರಮದ ಈಶ್ವರಾನಂದ ಮಹಾ ಸ್ವಾಮೀಗಳು, ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಗುರು ಮಲ್ಲೇಶ್ವರ ಮಠದ ಶಿವಶರಣೆ ಜಯದೇವಿ ತಾಯಿಯವರು, ದಾವಣಗೆರೆ ಮಠದ ಶಿವಶರಣೆ ದಾಕ್ಷಾಯಿಣಿ ತಾಯಿಯವರು, ಕೆ ಆರ್ ಪೇಟೆ ಮಠದ ಶಿವಶರಣೆ ಚಿನ್ಮಯಿ ತಾಯಿಯವರು ಮತ್ತು ಧಾರವಾಡ ಮಠದ ರಾಘವೇಂದ್ರ ಗೂರುಜಿ ದೇವಾಲಯಕ್ಕೆ ಆಗಮಿಸಿ ಶ್ರೀ ಯಕ್ಷೀ ಚೌಡೇಶ್ವರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು, ನಂತರ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಮಹಾ ಸ್ವಾಮಿಯವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಾಲಯದಲ್ಲಿ ಶ್ರೀ ನವಗ್ರಹ ಹವನ, ಶ್ರೀ ದತ್ತ ಹವನ, ಶ್ರೀ ರುದ್ರ ಹವನ, ಶ್ರೀ ಲಲಿತಾ ಹವನ, ಶ್ರೀ ರಾಮತಾರಕ ಹವನ, ಶ್ರೀ ಆಂಜನೆಯ ಹವನ ದೇವಾಲಯದ ಪ್ರದಾನ ಅರ್ಚಕರಾದ ಮಾದೇವ ಸ್ವಾಮಿಯವರ ಮುಂದಾಳತ್ವದಲ್ಲಿ ನಡೆದವು, ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಾವೇರಿ ಜಿಲ್ಲೆಯ ಅಂಕಸಾಪುರದ ಶ್ರೀ ಶಿವಾನಂದಾಶ್ರಮದ ಈಶ್ವರಾನಂದ ಮಹಾ ಸ್ವಾಮೀಜಿಯವರು ಮಾತನಾಡಿ ಬೇಡಿದನ್ನು ಕೋಡುವಂತ ಕಲ್ಪವೃಕ್ಷ ಈ ತಾಯಿ, ನೀವು ಒಳ್ಳೆಯ ಸಂಕಲ್ಪ ಮಾಡಿದರೆ ನಿಮ್ಮ ಇಷ್ಠಾರ್ಥಗಳನ್ನು ಯಕ್ಷಚೌಡೇಶ್ವರಿ ಈಡೇರಿಸುತ್ತಾಳೆ, ಇಲ್ಲಿನ ಅರ್ಚಕರಾದ ಮಾದೇವ ಸ್ವಾಮೀಯವರು ಮಾತೃ ಹೃದಯದವರು ತಾಯಿಯ ಅನುಗೃಹ ಇನ್ನಷ್ಟು ದಯಪಾಲಿಸಲಿ ಎಂದರು.

ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಗುರು ಮಲ್ಲೇಶ್ವರ ಮಠದ ಶಿವಶರಣೆ ಜಯದೇವಿ ತಾಯಿಯವರು ಮಾತನಾಡಿ ಎಲ್ಲರಲ್ಲಿ ಭಕ್ತಿ, ನಂಬಿಕೆ, ವಿಶ್ವಾಸ ಬಹಳ ಮುಖ್ಯ . ತಾಯಿಯ ಸನ್ನಿಧಿಯಲ್ಲಿ ನೀವು ಏನು ಸಂಕಲ್ಪ ಮಾಡಿಕೋಳ್ಳುತ್ತಿರೋ ಅವೆಲ್ಲವೂ ಸಿದ್ಧಿಯಾಗುತ್ತದೆ, ಸಮರ್ಪಣಾ ಭಾವದಿಂದ ನಮ್ಮನ್ನು ತೊಡಗಿಸಿ ಕೊಂಡಾಗ ತಾಯಿ ನೀಮಗೆ ಬೇಕಾದುದನ್ನು ದಯಪಾಲಿಸುತ್ತಾಳೆ ಎಂದು ಹೇಳಿದರು,.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ನಡೆದಾಡುವ ದೇವರಾದ ಪರಮ ಪೂಜ್ಯರನ್ನು ನೋಡಿದಾಗ ನಮಗೆ ಇನ್ನಷ್ಟು ಭಕ್ತಿ ಉಕ್ಕುತದೆ, ಅವರ ವರ್ಚಸು, ತೇಜಸ್ಸು ನಮ್ಮನ್ನು ಪಾವನ ಗೊಳಿಸುತ್ತದೆ, ಲಕ್ಷಾಂತರ ಜನರ ಅಭಿಮಾನಿಗಳನ್ನು ಹೊಂದಿದ ಮಾದೇವ ಸ್ವಾಮಿಗಳ ಆರ್ಶಿರ್ವಾದದಿಂದ ನಾವು ದೇವಿಯ ಕೃಪೆಗೆ ಪಾತ್ರರಾಗಿದ್ದೇವೆ, ದೇಶದ ಪರಂಪರೆ ಶ್ರೇಷ್ಠತೆ ಉಳಿಯಲು ಇಂತಹ ಸ್ವಾಮೀಗಳ ಆರ್ಶಿವಾದ ಮಾರ್ಗದರ್ಶನ ಕಾರಣ, ಎಂದರು.

ಇದೇ ವೇಳೆ, ( Neelgod Temple) ದೇವಾಲಯದ ಪ್ರದಾನ ಅರ್ಚಕರಾದ ಮಾದೇವ ಸ್ವಾಮಿಯವರು ಮಾತನಾಡಿ ಚಾರ್ತುಮಾಸದಲ್ಲಿ ಗುರುಗಳ ದರ್ಶನ ಮಾಡಬೇಕು . ತಮ್ಮ ಕೈಲಾದ ಗುರುಕಾಣಿಕೆ ಸಲ್ಲಿಸಿ ಗುರುಗಳ ಆರ್ಶಿವಾದ ಪಡೆದು ಕೊಳ್ಳಬೇಕು. ಗುರುಗಳ ಆರ್ಶಿವಾದ ಪಡೆದರೆ ನಮ್ಮ ಎಲ್ಲ ಕಷ್ಟಗಳು ದೂರವಾಗುತ್ತದೆ ಎಂದರು. 50 ನೇ ವರ್ಷದ ಚಾತುರ್ಮಾಸ್ಯ ಮುಕ್ತಾಯದ ಬಳಿ ಆಶಿರ್ವಚನ ನೀಡಿದ ಆಂದ್ರ ಪ್ರದೇಶದ ಯದವಗಿರಿ ಅದೋನಿ ಶಂಕರಾನಂದ ಸರಸ್ವತಿ ಮಹಾ ಸಂಸ್ಥಾನ ಮಠದ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಮಹಾ ಸ್ವಾಮಿಗಳು ತಾಯಿಯ ಸನ್ನಿಧಿಯಲ್ಲಿ ಶೃದ್ಧೆ-ಭಕ್ತಯಿಂದ ಪೂಜೆ ಸಲ್ಲಿಸಿದೆ ಇಷ್ಠಾರ್ಥ ಈಡೇರುತ್ತದೆ ಎಂದರು.

ಈ ಸಂದರ್ಭದಲ್ಲಿ ಸಮೀತಿಯ ಅದ್ಯಕ್ಷರಾದ ನರಸಿಂಹ ನಾಯ್ಕ, ಟ್ರಸ್ಟಿಗಳಾದ ವಿನಾಯಕ ಕವರಿ, ಗಣಪತಿ ನಾಯ್ಕ ಬಿಟಿ, ಮುಂತಾದವರು ಇದ್ದರು. ಶಿವಶಂಕರ ಬೆಂಗಳೂರು ತಂಡದವರಿoದ ಹರಿಕಥೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ನಡೆಯಿತು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button