ಐಷಾರಾಮಿ ಕಾರಿನಲ್ಲಿ ಹಸುಗಳನ್ನು ಸಾಗಿಸುತ್ತಿದ್ದರು

ಕಾರಿನ ಅಪಘಾತದ ವೇಳೆ ಬಹಿರಂಗ

ಕಾರಿನೊಳಗಿದ್ದ ದೃಶ್ಯ ನೋಡಿ ರಕ್ಷಣೆಗೆ ಬಂದವರು ಕಂಗಾಲು
ಇಬ್ಬರು ಪರಾರಿ
ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

[sliders_pack id=”3498″]

ಹೊನ್ನಾವರ: ಅಪಘಾತವಾದ ವೇಳೆ ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವ ವಿಚಾರ ಬಹಿರಂಗವಾಗಿದೆ. ಎರಡು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳೀಯರು ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದಾರೆ. ಆದರೆ, ಕಾರಿನಲ್ಲಿದ್ದ ದೃಶ್ಯವನ್ನು ನೋಡಿ ರಕ್ಷಣೆಗೆ ಧಾವಿಸಿದವರು ಕ್ಷಣಕಾಲ ದಂಗಾಗಿದ್ದಾರೆ. ಹೌದು, ಸ್ವಿಪ್ಟ್ ಕಾರಿನಲ್ಲಿ ಎರಡು ಹಸುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಈ ವೇಳೆ ಒಂದು ಹಸು ಸಾವನ್ನಪ್ಪಿದೆ. ಈ ದೃಶ್ಯವನ್ನು ನೋಡಿ ರಕ್ಷಣೆಗೆ ಧಾವಿಸಿದವರು ಕಾರಿನ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೀಗೆ ಕಾರಿನಲ್ಲಿ ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಭಟ್ಕಳಕ್ಕೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಹಿಂಸಾತ್ಮಕವಾಗಿ ದನಗಳನ್ನು ಸಾಗಿಸುತ್ತಿದ್ದ ಸ್ವಿಪ್ಟ್ ಕಾರಿನಲ್ಲಿ ಮೂವರು ಇದ್ದರು ಎನ್ನಲಾಗಿದ್ದು, ಇದರಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಓರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿ ಹೊನ್ನಾವರದ ವಲ್ಕಿಯಲ್ಲಿದ್ದ ಎನ್ನಲಾಗಿದೆ. ಈತ ಮೂಲತ: ಭಟ್ಕಳ ಬಂದರ್ ರೋಡಿನ ನಿವಾಸಿ ಸುಲೇಮಾನ ಎಂದು ತಿಳಿದುಬಂದಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ, ಹೊನ್ನಾವರ

Exit mobile version