Follow Us On

WhatsApp Group
Important
Trending

ಮುರುಡೇಶ್ವರದಿಂದ ಭಟ್ಕಳದ ತನಕ ಅದ್ದೂರಿಯಾಗಿ ನಡೆದ ಶೌರ್ಯ ಜಾಗರಣ ರಥಯಾತ್ರೆ

ಶ್ವ ಹಿಂದು ಪರಿಷತ್ ಭಜರಂಗದಳ ಘಟಕದಿಂದ ಆಯೋಜನೆ: ಅಪಾರ ಸಂಖ್ಯೆಯ ಜನರು ಭಾಗಿ

ಭಟ್ಕಳ: ವಿಶ್ವ ಹಿಂದು ಪರಿಷತ್ ಭಜರಂಗದಳ ಭಟ್ಕಳ ಘಟಕದಿಂದ ಶೌರ್ಯ ಜಾಗರಣ ರಥಯಾತ್ರೆಯು ಮುರುಡೇಶ್ವರದಿಂದ ಭಟ್ಕಳ ತನಕ ಅದ್ದೂರಿಯಾಗಿ ಜರುಗಿತು. ಶೌರ್ಯ ಜಾಗರಣ ಯಾತ್ರೆ ಸೆಪ್ಟೆಂಬರ್ 30 ರ ಶನಿವಾರ ಮುಂಜಾನೆ ಶಿರಸಿ ಯ ಮಾರಿಕಾಂಬಾ ದೇವಾಲಯದಿಂದ ಹೊರಟು ಅಕ್ಟೋಬರ್ 1 ಭಾನುವಾರ ಸಂಜೆ 6 ಘಂಟೆಗೆ ಮಾವಿನಗುಂಡಿ ಮಾರ್ಗವಾಗಿ ಶ್ರೀ ಕ್ಷೇತ್ರ ಬಂಗಾರಮಕ್ಕಿ ತಲುಪಿತ್ತು. ಅಕ್ಟೋಬರ್ 2 ಸೋಮವಾರ ಬೆಳಿಗ್ಗೆ 8 ಕ್ಕೆ ಬಂಗಾರಮಕ್ಕಿ ಯಿಂದ ಕವಲಕ್ಕಿಗೆ 11 ಘಂಟೆಗೆ ಬಂದು ಅಲ್ಲಿಂದ ನೇರವಾಗಿ ಶ್ರೀ ಕ್ಷೇತ್ರ ಮುರ್ಡೇಶ್ವರಕ್ಕೆ ಪುರ ಪ್ರವೇಶ ಮಾಡಿದ್ದು ಭವ್ಯ ಸ್ವಾಗತ ಮಾಡಲಾಯಿತು.

ಈ ವೇಳೆ ಮುರುಡೇಶ್ವರದ ಓಲಗ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಂಜೆ 6 ಗಂಟೆಗೆ ಭಟ್ಕಳದ ಮುಖ್ಯ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ ಭಜರಂಗದಳದ ಪ್ರಮುಖರು ಆಂಜನೇಯನ ಮೂರ್ತಿಗೆ ಹೂವಿನ ಹಾರ ಹಾಕಿ ಪುರ ಪ್ರವೇಶದ ನಂತರ ಸ್ವಾಗತಿಸಿಕೊಂಡರು. ಸಾವಿರಾರು ಹಿಂದು ಸಮಸ್ತರ ನೇತ್ರತ್ವದಲ್ಲಿ ಮುಖ್ಯವೃತ್ತದಿಂದ ಭಟ್ಕಳ ನಗರದ ಮುಖ್ಯ ರಸ್ತೆಯ ಮೂಲಕ ಅದ್ದೂರಿ ಮೆರವಣಿಗೆಯೊಂದಿಗೆ ರಥಯಾತ್ರೆಯುವ ನಗರ ಸಂಚಾರವನ್ನು ಮುಗಿಸಿ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣಕ್ಕೆ ಬಂದು ತಲುಪಿತು.

ಸಭಾ ಕಾರ್ಯಕ್ರಮದಲ್ಲಿ ಭಜರಂಗದಳದ ಜಿಲ್ಲಾ ಸಂಚಾಕರು, ಶೌರ್ಯ ಜಾಗರಣ ರಥಯಾತ್ರೆಯ ರಥ ಪ್ರಮುಖ ಅಮಿತಕುಮಾರ ಮಾತನಾಡಿ ‘ ಶೌರ್ಯ ಜಾಗರಣಾ ರಥಯಾತ್ರೆಯ ಮುಖ್ಯ ಉದ್ದೇಶವು ಮಲಗಿರುವ ಹಿಂದು ಸಮಾಜವನ್ನು ಬಡಿದೆಬ್ಬಿಸುವುದು ಎಂದು ಹೇಳಿದರು, ವಿಶ್ವ ಹಿಂದು ಪರಿಷತ್ತು ಜಿಲ್ಲಾ ಧರ್ಮಚಾರಿ ಸಂಪರ್ಕ ಪ್ರಮುಖ ಪತಂಜಲಿ ವೀಣಾಕರ ಮಾತನಾಡಿ ‘ ನಮ್ಮ ಪೂರ್ವಜರು ಅಂದು ಸಾಕಷ್ಟು ಶ್ರಮವಹಿಸಿ ಸನಾತನ ಧರ್ಮವನ್ನ ರಕ್ಷಿಸಿ ಉಳಿಸಿಕೊಂಡು ನಮ್ಮ ಇಂದಿನ ಪೀಳಿಗೆಯ ತನಕ ನಡೆಸಿಕೊಂಡು ಬಂದಿದ್ದಾರೆ ಅದನ್ನು ಇಂದಿನ ಪೀಳಿಗೆಗೆ ತಿಳಿಸುವ ಹಾಗೂ ನಮ್ಮಲ್ಲರ ಇತಿಹಾಸವನ್ನು ಸ್ಮರಿಸಿಕೊಳ್ಳುವುದಾಗಿದೆ ಎಂದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಂಕರ ಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ವಿಶ್ವ ಹಿಂದು ಪರಿಷತ್ ಪ್ರಮುಖರಾದ ರಾಮನಾಥ ಬಳಗಾರ, ಗೋವಿಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ದೀಪಕ ನಾಯ್ಕ, ಮುಕುಂದ ನಾಯ್ಕ ಸೇರಿದಂತೆ ವಿಶ್ವ ಹಿಂದು ಪರಿಷತ್, ಭಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button