Follow Us On

WhatsApp Group
Focus News
Trending

ಪಾಲಕರ ಸಮಾಗಮ ಕಾರ್ಯಕ್ರಮ-2023

ಭಟ್ಕಳ: “ಪಾಲಕರೊಂದಿಗೆ ಮಕ್ಕಳ ಸಂಬoಧ ಅತೀ ಮುಖ್ಯವಾದುದು, ಆದುದರಿಂದ ಪಾಲಕರು ತಮ್ಮ ಮಕ್ಕಳಿಗಾಗಿ ನಿತ್ಯ ಸಮಯವನ್ನು ಮೀಸಲಿರಿಸಬೇಕು ಹಾಗೂ ಅವರ ಕುಶಲೋಪರಿಯನ್ನು ವಿಚಾರಿಸಬೇಕು” ಎಂದು ಅಳ್ಳಂಕಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜಿ.ಎಸ್.ಹೆಗಡೆ ಹೇಳಿದರು.

ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ 2023-24ನೇ ಸಾಲಿನ ಪಾಲಕರ ಸಮಾಗಮ ಕಾರ್ಯಕ್ರಮ ಹಾಗೂ ವಿವಿಧ ವಿಷಯಗಳ ಆಡ್-ಆನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ವಚ್ಛಂದ – ಸಂಸ್ಕಾರಯುತ ವಾತಾವರಣ ಅತೀ ಮುಖ್ಯ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್ ಮಾತನಾಡಿ “ವಿದ್ಯಾರ್ಥಿಗಳು ಪದವಿ ಹಂತದಲ್ಲಿ ದೊರೆಯುವ ಅವಕಾಶ ಹಾಗೂ ಸೌಲಭ್ಯಗಳನ್ನು ಸೂಕ್ತವಾಗಿ ಉಪಯೋಗಿಸಿ, ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು” ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿದರು, ಬಿಏ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಕಪಿಲ್ ಭಟ್ ನಿರೂಪಿಸಿದರು ಮತ್ತು ಬಿಸಿಏ ವಿಭಾಗದ ಉಪಪ್ರಾಂಶುಪಾಲ ವಿಖ್ಯಾತ್ ಪ್ರಭು ವಂದಿಸಿದರು. ಈ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದ ಉಪ ಪ್ರಾಂಶುಪಾಲ ಪಿಎಸ್ ಹೆಬ್ಬಾರ್, ತರಬೇತಿ ಮತ್ತು ನಿಯೋಜನ ಅಧಿಕಾರಿ ವಿಘ್ನೇಶ್ ಪ್ರಭು, ಬೋಧಕ – ಬೋಧಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. 2022-23 ನೇ ಸಾಲಿನ ಪದವಿಪೂರ್ವ ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸ್ಕಾಲರಶಿಪ ನೀಡಲಾಯಿತು.

ವಿಸ್ಮಯ ನ್ಯೂಸ್, ಭಟ್ಕಳ

Back to top button