Big News
Trending

ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

ಕುಮಟಾ: ದಿನಾಂಕ 27 ಅಕ್ಟೋಬರ್ 2023 ರಂದು ಬೆಳಿಗ್ಗೆ 10.30ರಿಂದ ಸಾಯಂಕಾಲ 4:00ರ ವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋ ಸೇವಾಗತಿ ವಿಧಿ ಹಾಗೂ ವನವಾಸಿ ಕಲ್ಯಾಣ ಆಶ್ರಮ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ‘ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ’ ವನ್ನು ಏರ್ಪಡಿಸಲಾಗಿದೆ.

ಮನುಷ್ಯರಿಗೆ ಬರುವ ಜ್ವರ, ರಕ್ತದೊತ್ತಡ, ಸಿಹಿಮೂತ್ರ, ವಾಂತಿಭೇದಿ, ಮೂಲವ್ಯಾಧಿ, ಅಲರ್ಜಿ, ಸಂಧಿವಾತ, ನೆಗಡಿ, ಮೈಕೈನೋವು, ಕ್ಯಾನ್ಸರ್, ಹೃದಯಸಂಬಂಧಿ ಖಾಯಿಲೆ, ನಿದ್ರಾಹೀನತೆ, ಸೋರಿಯಾಸಿಸ್, ಅರೆತಲೆನೋವು, ಚರ್ಮರೋಗ, ಮೂರ್ಛೆರೋಗ, ಅಶಕ್ತತೆ, ದೃಷ್ಟಿನೇತ್ರ ಸಮಸ್ಯೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆ, ಬುದ್ಧಿಮಾಂದ್ಯತೆ, ನರಗಳ ದೌರ್ಬಲ್ಯ, ಸ್ತ್ರೀ ರೋಗಗಳು ಹೀಗೆ ಬಹುತೇಕ ಎಲ್ಲ ರೋಗಗಳಿಗೆ ಪಂಚಗವ್ಯ ಔಷಧಿಗಳಲ್ಲಿ ಅದ್ಭುತ ಪರಿಣಾಮದ ಶಕ್ತಿ ಇರುವುದು.

ಪಂಚಗವ್ಯ ಆಯುರ್ವೇದ ಔಷಧಿಗಳಲ್ಲಿ ಆಳವಾಗಿ ಅಧ್ಯಯನ ಮಾಡಿದ ಪ್ರಸಿದ್ಧ ವೈದ್ಯರಾದ :- ಡಾಕ್ಟರ್ ಡಿಪಿ ರಮೇಶ್ ಬೆಂಗಳೂರು ಶ್ರೀ ರಾಮಚಂದ್ರಾಪುರ ಮಠದ ಮಾಗೋ ಪ್ರಾಡಕ್ಟ್ಸ್ ಕಂಪನಿಯಲ್ಲಿ ಪಂಚಗವ್ಯ ಔಷಧಿಗಳ ತಾಂತ್ರಿಕ ಸಲಹೆಗಾರರು, ಇವರು ರೋಗಿಗಳನ್ನು ಉಚಿತವಾಗಿ ತಪಾಸಣೆ ಮಾಡಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರುತ್ತಿದ್ದೇವೆ. ಶಿಬಿರದ ಸ್ಥಳದಲ್ಲಿ ಗವ್ಯೋತ್ಪನ್ನ ವಸ್ತುಗಳು ಮತ್ತು ಔಷಧಿಗಳು ಮಾರಾಟಕ್ಕೆ ಲಭ್ಯವಿದೆ.

ಕಾರವಾರ ಜಿಲ್ಲಾ ಸಂಯೋಜಕರು: ಸ್ಥಳ:-‘ ರತ್ನಾಕರ’, ವನವಾಸಿ ಕಲ್ಯಾಣ ವಸತಿ ನಿಲಯ , ನಾಮಧಾರಿ ಸಭಾಭವನದ ಪಕ್ಕ, ಬಗ್ಗೊಣು ರೋಡ್, ಕುಮಟ , ಸಂಪರ್ಕ ದೂರವಾಣಿ ಡಾ. ಸುರೇಶ್ ಹೆಗಡೆ -9480341523, ಶ್ರೀ ಮೋಹನ್ ಗುನಗಾ – 82771 16461, ವಿಶ್ವೇಶ್ವರ ಹೆಗಡೆ – 9483618034

ವಿಸ್ಮಯ ನ್ಯೂಸ್, ಕುಮಟಾ

Back to top button