Important
Trending

ಇನೋವಾ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ: 8 ಮಂದಿ ಗಾಯ

ಭಟ್ಕಳ: ಇನೋವಾ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 8 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೂಢಭಟ್ಕಳ ಬೈಪಾಸ್ ಸಮೀಪ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಇನ್ನೊವಾ ಕಾರಿನಲ್ಲಿದ್ದ ಗಜೇಂದ್ರಗಡ ಗದಗ ನಿವಾಸಿ ರೇಷ್ಮಾ ರಾಠೋಡ, ಮಾರುತಿ ನಾಗಪ್ಪ ಅಜಮೀರ ಹಾಗೂ ಕ್ರೂಸರನಲ್ಲಿದ್ದ ಬೀಮನಗೌಡ, ಮುನೀರಾ ಫಯಾಜ್, ಮಂದಾಕಿನಿ ಬಳೆಗಾರ, ಅನಸೂಯ ಉಪಾಸಿ, ಬಸವರಾಜ ಪೂಜಾರಿ, ಕಾಡಪ್ಪ ಉಪಾಸಿ ಎಂದು ಗುರುತಿಸಲಾಗಿದೆ.

ಭಟ್ಕಳದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ನೋವಾ ಹಾಗೂ ಕುಂದಾಪುರದಿದ ಭಟ್ಕಳದ ಕಡೆಗೆ ಬರುತ್ತಿದ್ದ ಕ್ರೂಸರ್ ನಡುವೆ ಈ ಅಪಘಾತ ನಡೆದಿದೆ. 8 ಮಂದಿ ಗಾಯ ಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ರಭಸಕ್ಕೆ ಎರಡು ವಾಹನದ ಮುಂಭಾಗ ನಜ್ಜುಗ್ಗುಜ್ಜಾಗಿದೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button