ಹೊನ್ನಾವರ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ತಾಲೂಕಿನ ಬಳ್ಕೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಗ್ಗಾರ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸಮೀಪ ನಡೆದಿದೆ. ಬಳ್ಕೂರಿನಿಂದ ಹೆಗ್ಗಾರ ಕಡೆಗೆ ಮಹಿಳೆ ನಡೆದುಕೋಂಡು ಹೋಗುತ್ತಿರುವ ಸಂದರ್ಭದಲ್ಲಿ ಕಳಿಗೆದ್ದೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸಮೀಪ ಅಪರಿಚಿತ ವ್ಯಕ್ತಿ ಹಿಂದಿನಿAದ ಬಂದು ಬಾಯಿಗೆ ಕೈಯಿಂದ ಒತ್ತಿ ಹಿಡಿದು, ನೇಲಕ್ಕೆಬೀಳಿಸಿದ ಸಂದರ್ಭದಲ್ಲಿ ರಸ್ತೆಯಲ್ಲಿ ಜನರು ಬರುತ್ತಿರುವುದನ್ನು ಕಂಡು ಆರೋಪಿ ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರು ದಾಖಲಿಸಿದ್ದಾಳೆ.
ಮರುಳುಗಾರಿಕೆಗೆ ಆಗಮಿಸಿದ ಬಿಹಾರ ಮೂಲದ ವ್ಯಕ್ತಿ ಎಂದು ಅಂದಾಜಿಸಲಾಗಿದ್ದು ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೆ ಸಂದರ್ಭದಲ್ಲಿ ವಾಸವಾಗಿದ್ದ ಬಿಹಾರ ಮೂಲದ 6 ಜನರ ಪೈಕಿ ಒಬ್ಬ ವ್ಯಕ್ತಿ ಘಟನೆ ನಡೆದ ಸಮಯದಿಂದ ನಾಪತ್ತೆಯಾಗಿದ್ದಾನೆ. ಈ ವ್ಯಕ್ತಿಯು ಬಟ್ಟೆಗಳನ್ನು ವಾಸ ಸ್ಥಳದಲ್ಲಿಯೆ ಬಿಟ್ಟು ಪರಾಯಾಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ,
ಈ ಇನ್ನು ಉಳಿದ ಐವರನ್ನು ವಶಕ್ಕೆ ಪಡೆದ ಮಂಕಿ ಪೋಲಿಸರು ವಿಚಾರಣೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ. ಬಳ್ಕೂರ ಭಾಗದಲ್ಲಿ ಅಕ್ರಮ ಮರುಳುಗಾರಿಕೆ ಎಗ್ಗಿಲದೆ ನಡೆಯುತ್ತಿದ್ದು, ಬಿಹಾರ ಮೂಲದ ವ್ಯಕ್ತಿಗಳನ್ನು ಮರುಳುಗಾರಿಕೆಗೆ ಬಳಸಲಾಗುತ್ತಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ