Important
Trending

ಕಾರು ಹಾಗು ಆಟೋರಿಕ್ಷಾ ನಡುವೆ ಭೀಕರ ಅಪಘಾತ: ಓರ್ವ ಮಹಿಳೆ ಸಾವು

ಶಿರಸಿ: ಆಟೋರಿಕ್ಷಾ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ 6 ಜನ ಗಂಭೀರವಾಗಿ ಗಾಯಗೊಂಡು ಓರ್ವ ಮಹಿಳೆ ಸಾವು ಕಂಡ ಘಟನೆ ಶಿರಸಿ ಸಿದ್ದಾಪುರ ಮುಖ್ಯ ರಸ್ತೆಯ ಯಡಳ್ಳಿ ಸಮೀಪ ಮಂಗಳವಾರ ನಡೆದಿದೆ. ಶಿರಸಿ ಅಂಬಾಗಿರಿಯ ವಿಶಾಲಾಕ್ಷಿ ರಾಮಕೃಷ್ಣ ಹೆಗಡೆ ( 60) ಮೃತಪಟ್ಟ ದುರ್ದೈವಿ.

ನಿಲೇಕಣಿ ಯ ಅನಿತಾ ಅಶೋಕ ಶಿರಾಲಿ, ಶ್ರೀಷಾ ಅಶೋಕ ಶಿರಾಲಿ, ಆದರ್ಶ ಅಶೋಕ ಶಿರಾಲಿ,ರವಿ ಕೆರೇಕೈ,ಸುಜಯ ಶ್ರೀನಿವಾಸ,ಅಶೋಕ ವಿನಾಯಕ ಶಿರಾಲಿ ಗಾಯಾಳುಗಳಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕನ ನಿರ್ಲಕ್ಷ್ಯವೇ ಅಪಘಾತ ಕಾರಣವೆಂದು ತಿಳಿದು ಬಂದಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button