Follow Us On

WhatsApp Group
Important
Trending

ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹರಿದು ಯುವಕ ಸಾವು

ಹೊನ್ನಾವರ: ಅಕ್ರಮ ಮರಳುಸಾಗಾಟ ಮಾಡುತ್ತಿದ್ದ ಟಿಪ್ಪರ್ ಹರಿದು ಯುವಕ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರಿಕುರ್ವಾ ಸಮೀಪ ನಡೆದಿದೆ. ಹಡಿನಬಾಳ ನಿವಾಸಿ ದರ್ಶನ್ ಗೌಡ ಮೃತ ಯುವಕನಾಗಿದ್ದು, ಈತನು ಪಿ.ಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ . ಈ ಯುವಕ ಮರಳು ತೆಗೆಯುವ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ. ತಡರಾತ್ರಿ ಕರಿಕುರ್ವದ ಶರಾವತಿ ನದಿ ತೀರದ ಭಾಗದಲ್ಲಿ ಅಕ್ರಮವಾಗಿ ಮರುಳುಗಾರಿಕೆ ನಡೆಯುತ್ತಿದ್ದು, ಇಲ್ಲಿಗೆ ಲಾರಿಗೆ ಮರಳು ತುಂಬುವ ಕೆಲಸಕ್ಕೆ ತೆರಳಿದ್ದ ಎಂದು ಹೇಳಲಾಗುತ್ತಿದೆ, ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button