Big News
Trending

ಮಂಗಳೂರಿನಿoದ ಗೋವಾಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್: ಲಕ್ಸುರಿ ರೈಲಿನಲ್ಲಿ ಪ್ರಯಾಣ ಮಾಡಿ ಸಂಭ್ರಮಿಸಿದ ಪ್ರಯಾಣಿಕರು

ಕಾರವಾರ: ದೇಶದ ಮಹತ್ವಾಕಾಂಕ್ಷಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಚಾಲನೆ ನೀಡಿದ್ದಾರೆ. ಅದರಂತೆ ಮಂಗಳೂರಿನಿoದ ಗೋವಾ ಸಂಚಾರ ಮಾಡುವ ಈ ವೇಗದ ರೈಲಿನ ಸಂಚಾರಕ್ಕೆ ಕೂತುಹಲದಿಂದ ಕಾದಿದ್ದ ನೂರಾರು ಮಂದಿ ಕೂಡ ಲಕ್ಸುರಿ ರೈಲಿನಲ್ಲಿ ಪ್ರಯಾಣ ಮಾಡಿ ಸಂಭ್ರಮಿಸಿದರು.

ಗಂಟೆಗೆ 120 ಕಿಮೀ ಗೂ ಅಧಿಕ ವೇಗದಲ್ಲಿ ಚಲಿಸಲಿಸುವ ಹಾಗೂ 8 ಕೋಚ್ ಗಳನ್ನು ಹೊಂದಿದ್ದ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರೈಲಿಗೆ ಹಸಿರು ನಿಶಾನೆ ತೋರುತ್ತಿದ್ದಿಂದ ಮಂಗಳೂರಿನಿoದ, ಉಡುಪಿ ಹಾಗೂ ಕಾರವಾರ ಮಾರ್ಗವಾಗಿ ಗೋವಾಗೆ ಎಕ್ಸ್ ಪ್ರೆಸ್ ರೈಲ್ ಸಂಚಾರ ಮಾಡಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ರೈಲು ಏರ್ ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್ ಗಳನ್ನು ಹೊಂದಿದೆ. ಅಲ್ಲದೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ.

ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್ , ಸಿಸಿಟಿವಿಗಳು ಸೇರಿದಂತೆ ವಿಮಾನದಂತೆಯೇ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ರೈಲಿನಲ್ಲಿ ನೂರಾರು ಮಂದಿ ಪ್ರಯಾಣ ಬೆಳಿಸಿದರು. ಇನ್ನು ರೈಲು ಗುರುವಾರ ಹೊರತುಪಡಿಸಿ ವಾರದ 6 ದಿನ ಬೆಳಗ್ಗೆ 8.30 ಕ್ಕೆ ಮಂಗಳೂರುನಿAದ ಹೊರಟು 9.50 ಕ್ಕೆ ಉಡುಪಿ, 12.10 ಕ್ಕೆ ಕಾರವಾರ ಹಾಗೂ 1.05 ಕ್ಕೆ ಮಡಂಗಾವ್ ತಲುಪಲಿದೆ.

ಮಡಗಾಂವ್ ನಿಂದ ಸಂಜೆ 6.10 ಕ್ಕೆ ಹೊರಟು, 6.57 ಕ್ಕೆ ಕಾರವಾರ, 9.14 ಕ್ಕೆ ಉಡುಪಿ,10.45 ಕ್ಕೆ ಮಂಗಳೂರು ತಲುಪಲಿದೆ. ಮಾರ್ಗಮಧ್ಯೆ ಕಾರವಾರ ಮತ್ತು ಉಡುಪಿ ಹೊರತುಪಡಿಸಿ ಬೇರೆಲ್ಲೂ ನಿಲುಗಡೆ ಇಲ್ಲ. ರೈಲಿನಲ್ಲಿ ಎಲ್ಲವೂ ಹೈಟೆಕ್ ಇದ್ದು ಜನರು ಅದನ್ನು ಸರಿಯಾಗಿ ಬಳಕೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಇಂತಹ ಯೋಜನೆಗಳನ್ನು ಹೆಚ್ಚು ಜಾರಿ ಮಾಡಬೇಕು ಎಂದು ಸಂತಸ ಹಂಚಿಕೊoಡರು.

ಇನ್ನು ಒಂದೇ ಭಾರತ್ ರೈಲು ಉಡುಪಿ, ಕಾರವಾರದಲ್ಲಿ ಮಾತ್ರ ನಿಲುಗಡೆ ಹೊಂದಿರುವ ಕಾರಣ ಎರಡು ಸ್ಟೇಷನ್ಗಳಲ್ಲಿ ರೈಲಿನನ್ನು ಕಲಾ ತಂಡಗಳೊoದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕಾರವಾರದಲ್ಲಿ ರೈಲು ಆಗಮಿಸುತ್ತಿದ್ದಂತೆ ನೆರೆದಿದ್ದ ನೂರಾರು ಜನರು ಕುತೂಹಲದಿಂದ ವೀಕ್ಷಣೆ ನಡೆಸಿದರು. ಇನ್ನು ಇದೇ ವೇಳೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ರೈಲು ಆಗಮಿಸುತ್ತಿದ್ದ ಘೋಷಣೆ ಮೊಳಗಿಸಿದರು. ಆದರೆ ಕಾರ್ಯಕ್ರಮದ ವೇಳೆ ಬಿಜೆಪಿಯರು ಪಕ್ಷದ ಸಾಲು ಹಾಕಿ ಸರ್ಕಾರದ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದ ರಿತಿ ಮಾಡುತ್ತಿರುವುಸಕ್ಕೆ ಶಾಸಕ ಸತೀಶ್ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ವೇಗದಲ್ಲಿ ಚಲಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಿಂದ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಸಹಕಾರಿಯಾಗಲಿದ್ದು ಹೊಸ ಭರವಸೆ ಮೂಡಿದೆ. ಅಲ್ಲದೆ ಉಡುಪಿ, ಮಂಗಳೂರಿಗೆ ನಿತ್ಯ ಚಿಕಿತ್ಸೆಗೆ ತೆರಳುವವರಿಗೂ ಮತ್ತು ಕಾರವಾರದಿಂದ ಗೋವಾಗೆ ನಿತ್ಯ ಕೆಲಸಕ್ಕೆ ತೆರಳುವವರಿಗೂ ಈ ರೈಲು ಅನುಕೂಲವಾಗಲಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button