ಭಟ್ಕಳ: ಭಾರತ ಪ್ರವಾಸಕ್ಕೆಂದು ಬಂದಿದ್ದ ರಷ್ಯಾದ ಪ್ರಜೆಯೊರ್ವರು ಮುರ್ಡೇಶ್ವರದ ಕಡಲ ತೀರದಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆ ಸೇರಿದರೂ ಚೇತರಿಸಿಕೊಳ್ಳದೆ ಮೃತಪಟ್ಟ ಘಟನೆ ನಡೆದಿದೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಷ್ಯಾ ದೇಶದ ಅಲೇಕ್ಷಾಂಡರ್ ತನೆಗಾ( 71) ಮೃತಪಟ್ಟ ವ್ಯಕ್ತಿ.
ಇವರು ರಷ್ಯಾ ದೇಶದಿಂದ ತಂಡವನ್ನು ಕಟ್ಟಿಕೊಂಡು ಗೋವಾಕ್ಕೆ ಬಂದಿಳಿದಿದ್ದರು. ಗೋವಾದ ಪ್ರದೇಶಗಳನ್ನು ಸುತ್ತಾಡಿ ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಅಲ್ಲಿ ದೇವಸ್ಥಾನದ ಬಳಿಯಲ್ಲಿ ತೆರಳುವಾಗ ಹಠಾತನೆ ಕುಸಿದು ಬಿದ್ದಿದ್ದು 5 ನಿಮಿಷ ಪ್ರಾಥಮಿಕ ಚಿಕಿತ್ಸೆ ನೀಡದ ಬಳಿಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಇಲ್ಲಿ ವೈದ್ಯರು ಚಿಕಿತ್ಸೆ ನೀಡಿದರು ಕುಸಿದು ಬಿದ್ದ ವ್ಯಕ್ತಿ ಚೇತರಿಸಿಕೊಳ್ಳದೆ ಇದ್ದಾಗ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಘೋಷಿಸಿದ್ದಾರೆ.
ವಿಸ್ಮಯ ನ್ಯೂಸ್ , ಉದಯ್ ಎಸ್ ನಾಯ್ಕ ಭಟ್ಕಳ