ಮಾರ್ಚ್ 2 ರಂದು ಆಲೆಮನೆ ಹಬ್ಬ: ಬಂದವರಿಗೆಲ್ಲ ಉಚಿತವಾಗಿ ಕಬ್ಬಿನಹಾಲು, ಮಂಡಕ್ಕಿ -ಮಿರ್ಚಿ ಆತಿಥ್ಯ
ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ಮಾರ್ಚ್ 2 ರಂದು ಹಳವಳ್ಳಿ ಆಲೆಮನೆ ಹಬ್ಬ ನಡೆಯಲಿದೆ. ನಶಿಸುತ್ತಿರುವ ಆಲೆಮನೆಗಳ ಪರಿಚಯ ಮುಂದಿನ ತಲೆಮಾರಿನವರಿಗೆ ಪರಿಚಯಿಸುವ ಉದ್ದೇಶ ಹಾಗೂ ಎಲ್ಲರೂ ಒಂದೆಡೆ ಸೇರಿ ಸಮಯವನ್ನು ಸದ್ವಿನಿಯೋಗ್ಯ ಮಾಡುವ ಸದುದ್ದೇಶದಿಂದ ಸಮಾನ ಮನಸ್ಕ ಯುವಕರೆಲ್ಲಾ ಸೇರಿ ಆಲೆಮನೆ ಹಬ್ಬವನ್ನು ಆಯೋಜಿಸುತ್ತಿದ್ದಾರೆ.
ಕುಡಿಯಲು ಕಬ್ಬಿನ ಹಾಲು ಹಾಗೂ ತಿನ್ನಲು ಮಿರ್ಚಿ ಹಾಗೂ ಮಂಡಕ್ಕಿ ಉಚಿವಾಗಿರುತ್ತದೆ,ಮನೆಗೆ ತೆಗದುಕೊಂಡು ಹೋಗುವವರಿಗೂ ಕಬ್ಬಿನ ಹಾಲು ಕೈಗಟಕುವ ದರದಲ್ಲಿ ಸಿಗಲಿದೆ. ವಿಶೇಷ ಆಕರ್ಷಣೆಯಾಗಿ ಸ್ಥಳೀಯ ಸಿದ್ದಿ ಜನಾಂಗದವರ ಧಮಾಮಿ ನೃತ್ಯ ಏರ್ಪಡಿಸಲಾಗಿದೆ.
ಶ್ರೀ ಸಿದ್ಧಿವಿನಾಯಕ ಹವ್ಯಕ ಟ್ರಸ್ಟ್, ಕಿರಣ ಯುವಕ ಮಂಡಲ,ಆಶಾ ಯುವತಿ ಮಂಡಲ , ಹಳವಳ್ಳಿಯ ಸಮಸ್ತ ಊರನಾಗರಿಕರ ಆಶ್ರಯದಲ್ಲಿ ಮಾರ್ಚ್ 2 ರ ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಸಂಘಟನೆಯ ಪರವಾಗಿ ಪ್ರಮುಖರಾದ ನಾರಾಯಣ ಹೆಬ್ಬಾರ್ ಹಾಗೂ ವಿಶ್ವನಾಥ ಹೆಬ್ಬಾರ್ ಸರ್ವರಿಗೂ ಸ್ವಾಗತ ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ