ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ನ ಎಲ್ಲಾ ಚಟುವಟಿಕೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಮುರ್ಡೇಶ್ವರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ನ ಎಲ್ಲಾ ಚಟುವಟಿಕೆ ಧಾರವಾಡ ಉಚ್ಛ ನ್ಯಾಯಾಲಯ ತೆಡೆಯಾಜ್ಞೆ ನೀಡಿದೆ. ಅಲ್ಲದೇ ಮುಂದಿನ ಟೆಂಡರ್ ಕರೆದು ಕಾರ್ಯಾದೇಶ ನೀಡುವವರೆಗೆ ಈ ತಡೆಯಾಜ್ಞೆ ಮುಂದುವರೆಯುವುದಾಗಿ ನ್ಯಾಯಾಲಯ ಹೇಳಿದೆ.

ಇತ್ತೀಚಿಗೆ ಪ್ರವಾಸೋಧ್ಯಮ ಇಲಾಖೆ ಮತ್ತೊಂದು ಟೆಂಡರ್ ಕರೆದಾಗ ಟೆಂಡರ್ ಹಾಕಲು ಸಮಯದ ಅವಕಾಶ ಇಲ್ಲ. ಹೀಗಾಗಿ ಟೆಂಡರ್‌ಗೆ ಮತ್ತಷ್ಟು ಅವಕಾಶ ಕೊಡಬೇಕೆಂದು ನ್ಯಾಯಾಲಯದಲ್ಲಿ ವ್ಯಕ್ತಿಯೋರ್ವರು ರಿಟ್ ಅಪೀಲು ಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಎಲ್ಲಾ ಸ್ಕೂಬಾ ಡೈವಿಂಗ್ ಚಟುವಟಿಕೆಗೆ ತಡೆಯಾಜ್ಞೆ ನೀಡಿದೆ. ಹಾಗೇ ಮುಂದಿನ ಟೆಂಡರ್ ಪ್ರಕ್ರಿಯೇಯನ್ನು ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ವಿಸ್ಮಯ ನ್ಯೂಸ್ , ಮುರ್ಡೇಶ್ವರ

Exit mobile version