Important
Trending

ಶಿರಸಿ ಮಾರಿಕಾಂಬಾ ಜಾತ್ರೆಗೆ ಜನಪ್ರವಾಹ: ನಿಯಮ ಮೀರುತ್ತಿರುವ ವಾಹನ ಸವಾರರು: ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ತ

ಶಿರಸಿ: ಮಾರಿಕಾಂಬಾ ಜಾತ್ರೆಗೆ ಜನಪ್ರವಾಹವೇ ಹರಿದುಬರುತ್ತಿದೆ. ಅದರಲ್ಲೂ ವಾರಾಂತ್ಯವಾಗಿರುವುದರಿoದ ಎಲ್ಲಿ ನೋಡಿದರೂ ಜನಸಮೂಹವೇ ಕಾಣುತ್ತಿದೆ. ಕಾಲು ಹಾಕುವುದಕ್ಕೂ ಕಷ್ಟಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಎಲ್ಲಿ ನೋಡಿದರಲ್ಲಿ ದ್ವಿಚಕ್ಷ ವಾಹನ ಹಾಗು ಕಾರುಗಳ ಸಾಲು ಸಾಲು ಕಾಣುತ್ತಿದೆ. ವಾಹನ ನಿಯಂತ್ರಿಸಲು ಶತಾಯಗತಾತ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ. ವಾಹನ ಸವಾರರು ನಿಯಮ ಮೀರುತ್ತಿದ್ದು, ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಹುಬ್ಬಳ್ಳಿ ರಸ್ತೆ,ಕುಮಾಟಾ ರಸ್ತೆ,ಯಲ್ಲಾಪುರ ರಸ್ತೆ, ವಾಹನಗಳಿಂದ ತುಂಬಿ ಹೋಗಿದೆ. ಈ ರಸ್ತೆಯಲ್ಲಿ ಚಲಿಸಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button