Trending
ಮಾರ್ಚ 30 ರ ಶನಿವಾರ ಹಾರವಾಡದಲ್ಲಿ ಶ್ರೀ ದುರ್ಗಾದೇವಿ ದೇವರ ವಾರ್ಷಿಕ ಪಲ್ಲಕ್ಕಿ ಉತ್ಸವ , ರಂಗ ಪಂಚಮಿ
ಮಸಣ ಸೇರಿದ ಜೂಜುಗಾರ ನಾಟಕ ಪ್ರದರ್ಶನ
ಅಂಕೋಲಾ: ತಾಲೂಕಿನ ಹಾರವಾಡ ಗ್ರಾಮದ ಆದಿಶಕ್ತಿ ಶ್ರೀದುರ್ಗಾದೇವಿ ದೇವಾಲಯದ ವಾರ್ಷಿಕ ಪಲ್ಲಕಿ ಉತ್ಸವ ರಂಗಪಂಚಮಿ ಮಾರ್ಚ್ 30 ರ ಶನಿವಾರ ವಿಜ್ರಂಭಣೆಯಿಂದ ನಡೆಯಲಿದೆ. ಉತ್ಸವದ ಅಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ಶ್ರೀದೇವಿಯ ಪಲ್ಲಕಿ ಮೆರವಣಿಗೆ ಪರಿವಾರ ದೇವರುಗಳಾದ ಶ್ರೀಗುಡಿದೇವ, ಶ್ರೀವಿಘ್ನೇಶ್ವರ ಮತ್ತು ಕರಿದೇವರ ಸನ್ನಿಧಿಗೆ ತೆರಳಲಿದ್ದು ಸಂಜೆ 4 ಗಂಟೆಗೆ ದೇವರ ಪಲ್ಲಕಿ ಕೋಡಿಬೀರ ದೇವಸ್ಥಾನಕ್ಕೆ ಭೇಟಿ ನೀಡಲಿದೆ.
ಸಂಜೆ 6 ರಿಂದ ಸವಾಲು ಕಾರ್ಯಕ್ರಮ, ರಾತ್ರಿ 12 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ ನಂತರ ಮಸಣ ಸೇರಿದ ಜೂಜುಗಾರ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ. ಮಾರ್ಚ್ 31 ರಂದು ಮುಂಜಾನೆ ಮಂಗಲ ಸ್ಥಾನಕ್ಕೆ ಪಲ್ಲಕಿ ಮೆರವಣಿಗೆ ತೆರಳಲಿದ್ದು ನಂತರ ಪೂಜಾ ಕಾರ್ಯಕ್ರಮ ನಡೆಯಲಿದೆ. ಭಕ್ತ ಜನರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದು ಶ್ರೀದುರ್ಗಾದೇವಿ ದೇವಾಲಯದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ