ಹಟ್ಟಿಕೇರಿಯ ಜೆ.ಸಿ ‘ಅಜೇಯ ದಾಖಲೆ’
ಹಲವರಿಗೆ ಸನ್ಮಾನ
ಜೈ ಹಿಂದ್ ಸಭಾಭನವದಲ್ಲಿ ಸರಳ ಸಮಾರಂಭ
[sliders_pack id=”3491″]
ಅಂಕೋಲಾ : ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ (ರಿ) ಅಂಕೋಲಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ, ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ-ಅoಕೋಲಾ ಘಟಕದ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತಾಲೂಕಿನ ಆಯ್ದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜೈಹಿಂದ ಹೈಸ್ಕೂಲ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ತಾಲೂಕಾ ಕ್ಷೇತ್ರಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ, ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರ ಸಂಘದವರು ಉತ್ತಮ ಕಾರ್ಯ ಮಾಡುತ್ತಿದ್ದು ತಾಲೂಕಿನ ಎಸ್.ಎಸ್,ಎಲ್.ಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿ ಭವಿಷ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆದು ದೇಶದ ಸತ್ಪçಜೆಗಳಾಗುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಜೈಹಿಂದ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಎಸ್ ಕಾಮತ, ಪಿ.ಎಮ್.ಪ್ರೌಢಶಾಲೆಯ ನಿವೃತ್ತ ಪಾಚಾರ್ಯ ಆರ್.ವಿ.ಕೇಣಿ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಕೋರಿದರು.
ವಿಶೇಷ ಸನ್ಮಾನ : ಕೊವಿಡ್ ಭೀತಿಯ ನಡುವೆಯೂ ಸರ್ಕಾರ ಮತ್ತು ಪ್ರೌಢಶಿಕ್ಷಣ ಮಂಡಳಿಯ ಮಾರ್ಗಸೂಚಿಯನ್ವಯ ತಾಲೂಕಿನಲ್ಲಿ ಪರೀಕ್ಷೆಗಳು ಸೂಸುತ್ರವಾಗಿ ನಡೆಯಸಲು ಕಾರಣಿಕರ್ತರಾದ ಕ್ಷೇತ್ರಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ, ನೋಡೆಲ್ ಅಧಿಕಾರಿ ಎನ್.ವಿ ನಾಯಕ, ಸಮನ್ವಯಾಧಿಕಾರಿ ಹರ್ಷಿತಾ ನಾಯಕ ಇವರನ್ನು ಸನ್ಮಾನಿಸಿ ವಿಶೇಷ ಗೌರವ ನೀಡಲಾಯಿತು.
ಜೆ.ಸಿ ‘ಅಜೇಯ’ ಸಾಧನೆ : ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹಟ್ಟಿಕೇರಿಯ ಜೆ.ಸಿ ಶಾಲೆಯು ಕಳೆದ 12 ವರುಷಗಳಲ್ಲಿ 10 ಬಾರಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದಂತಾಗಿದೆ. ಇದೆ ಶಾಲೆಯ ವಿದ್ಯಾರ್ಥಿ ‘ಅಜೇಯ’ ಮಹಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ಶಾಲೆಗಷ್ಟೆ ಅಲ್ಲದೇ ತಾಲೂಕಿಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ. ತಾಲೂಕಿನ ಈ ವರ್ಷದ ಟಾಪ್ 10 ಪಟ್ಟಿಯಲ್ಲಿಯೂ ಹಟ್ಟಿಕೇರಿಯ ಜೆ.ಸಿ ಶಾಲೆಯ ವಿದ್ಯಾರ್ಥಿಗಳೇ ಹೆಚ್ಚಿದ್ದು ಗಮನ ಸೆಳೆದಿದ್ದಾರೆ.
10ರ 10ರೊಳಗಿನವರು : ಅಜೇಯ ಮಹಾಲೆ, ಸ್ಪೂರ್ತಿ ನಾಯಕ ಸೋನಾಲಿ ಗಾಂವಕರ ಆದಿತ್ಯ ಭಟ್, ನಿಶ್ಚಲ್ ನಾಯ್ಕ, ಶಂಕರ ಗೌಡ, ಶ್ರೇಯಾ ಭಟ್, ಬಿ.ಜೆ ಹೃತಿಕ, ಸಿಂಚನಾ ನಾಯಕ, ಮಹೇಂದ್ರ ಬೋವಿ ವಡ್ಡರ್, ನೇಹಾ ನಾಯಕ, ಅನನ್ಯ ನಾಯಕ, ಪ್ರೀತಿ ನಾಯಕ, ಸೇರಿದಂತೆ 2019-2020ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ತಾಲೂಕಿನ ಟಾಪ್ 10 ಪಟ್ಟಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮ ಹಂಚಿಕೆ : ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಬಂಟ್ ಪ್ರಾಸ್ಥವಿಕವಾಗಿ ಮಾತನಾಡಿದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಂಕೋಲಾ ಘಟಕಾಧ್ಯಕ್ಷ ಜಿ.ಆರ್.ನಾಯ್ಕ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಶ್ರೀಧರ ನಾಯ್ಕ ವಂದಿಸಿದರು. ಸಂಘದ ನಿರ್ದೇಶಕರಾದ ಜಿ,ಆರ್.ತಾಂಡೇಲ್, ಸುಧಾ ಆಚಾರಿ ನಿರೂಪಿಸಿದರು. ಪ್ರಶಾಂತ ನಾಯ್ಕ ಸಹಕರಿಸಿದರು. ವಿವಿಧ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಶಿಕ್ಷಕರು, ವಿದ್ಯಾರ್ಥಿ ಪಾಲಕರು ಮತ್ತು ಸಂಘಟನಾ ಸಮಿತಿಯ ಇತರರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568