Join Our

WhatsApp Group
Important
Trending

ಬಾಡ ಜಾತ್ರಾ ಮಹೋತ್ಸವ: ಮಹಾರಥದಲ್ಲಿ ಆಸೀನಳಾದ ಕಾಂಚಿಕಾಂಬೆಯನ್ನು ಕಣ್ತುಂಬಿಕೊಂಡ ಭಕ್ತರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಜಾತ್ರಗಳಲ್ಲಿ ಒಂದಾದ ಕುಮಟಾ ತಾಲೂಕಿನ ಶ್ರೀ ಕಾಂಚಿಕಾoಬ ಪರಮೇಶ್ವರಿ ದೇವರ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯಿತು. ತಾಲೂಕಿನ ಸುತ್ತಮುತ್ತಲಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ರಥ ಎಳೆದು ಪುನೀತರಾದರು.

ಪುರಾಣ ಪ್ರಸಿದ್ಧ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯವು ಅತ್ಯಂತ ಶಕ್ತಿಯುತ, ಭಕ್ತರ ಇಷ್ಟಾರ್ಥ ಸಿದ್ಧಿಕ್ಷೇತ್ರವಾಗಿದ್ದು, ವರ್ಷಂಪ್ರತಿ ನಡೆಯುವ ಶ್ರೀ ದೇವರ ಜಾತ್ರಾ ಮಹೋತ್ಸವವು ಅತ್ಯಂತ ವಿಜ್ರಂಭಣೆಯಿಯಿoದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯುತ್ತದೆ. ಅದೇ ರೀತಿ ಈ ವರ್ಷವೂ ಸಹ ಸಾವಿರಾರು ಭಕ್ತರ ಒಗ್ಗೂಡುವಿಕೆಯಲ್ಲಿ ತಾಯಿ ಶ್ರೀ ಕಾಂಚಿಕಾoಬ ಪರಮೇಶ್ವರಿ ದೇವರ ಮಹಾ ರಥೋತ್ಸವು ಸಂಪನ್ನಗೊoಡಿತು.

ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಶ್ರೀ ದೇವರಿಗೆ ಉಡಿ ಸೇವೆ, ಉರುಳು ಸೇವೆ, ತುಲಾಬಾರ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸುವುದು ಇಲ್ಲಿನ ವಿಶೇಷವಾಗಿದ್ದು, ಅದೇ ರೀತಿ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ತಾಯಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಿದರು. ಸಾಯಂಕಾಲದ ವೇಳೆ ನಡೆದ ಮಹಾ ರಥೋತ್ಸವದಲ್ಲಿ ಆಸಿನಳಾದ ಕಾಂಚಿಕಾoಬೆಯನ್ನು ಕಣ್ತುಂಬಿಕೊoಡು, ಸಂಪ್ರದಾಯದoತೆ ರಥಕ್ಕೆ ಬಾಳೆ ಹಣ್ಣು ಹೊಡೆದು ಕೃತಾರ್ಥರಾದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button