ಸಿದ್ದಾಪುರ : ಅಡಕೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು ಒಂದುವರೆ ಎಕರೆಯಷ್ಟು ಅಡಕೆ ತೋಟ ಸುಟ್ಟುಹೋದ ಘಟನೆ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊನ್ನೆಹದ್ದ(ಕೋಡನಮನೆ)ದಲ್ಲಿ ನಡೆದಿದೆ.
ಹೊನ್ನೆಹದ್ದದ ಚಂದ್ರಶೇಖರ ನರಸಿಂಹ
ಹೆಗಡೆ ಹಾಗೂ ಸಂತೋಷ ಎಂ.ಹೆಗಡೆ ಅವರ
ಅಡಕೆ ತೋಟ ಇದಾಗಿದೆ. ಬೆಂಕಿ ಬಿದ್ದ ಸುದ್ದಿ
ತಿಳಿಯುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು
ಶಿರಸಿಯಿಂದ ಅಗ್ನಿಶಾಮಕ ವಾಹನ ಬರುವದರೊಳಗೆ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
ಆಕಸ್ಮಿಕವಾಗಿ ಅಡಕೆ ತೋಟಕ್ಕೆ ಬೆಂಕಿ
ಬಿದ್ದಿರುವುದರಿಂದ ಅಡಕೆ ಸಸಿ, ಗಿಡ,
ಮರಗಳು ಹಾಗೂ ಬಾಳೆ, ಕಾಳುಮೆಣಸಿನ
ಬಳ್ಳಿಗಳು ಸುಟ್ಟು ಹೋಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ವಿಸ್ಮಯ ನ್ಯೂಸ್ ಸಿದ್ದಾಪುರ