ಕಾರವಾರ: ಬಾಂಗಾಲಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಮತ್ತೆ ವರುಣನ ಆಗಮನವಾಗದ್ದು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಅದೇ ರೀತಿ ಕುಮಟಾ ತಾಲೂಕಿನಲ್ಲಿಯೂ ಸಹ 18 ರ ತಡರಾತ್ರಿಯಿಂದೇ ಮಳೆ ಸುರಿದಿದ್ದು, ಗಾಳಿ ಸಹಿ ತಾಲೂಕಿನ ಹಲವೆಡೆ ವರಣನ್ನು ಅಬ್ಬರಿಸಿದ್ದಾನೆ. ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮುಂದಿನ ಐದು ದಿನದಲ್ಲಿ ಸಣ್ಣದಾಗಿ ಮಳೆಯಾಗಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಮೇ 20 ರಿಂದ 22ರ ವೆರೆಗೆ ಅರಬ್ಬಿ ಸಮುದ್ರದ ಕಡೆಯಿಂದ ಭಾರಿ ಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಅತಿಯಾದ ಗಾಳಿ ಇರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾದ ಗಂಗೂಬಾಯಿ ಮಾನಕರ ಅವರು ಸೂಚನೆ ನೀಡಿದ್ದಾರೆ. ಇನ್ನೂ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗೆ ಸಾಕಷ್ಟು ಹಾನಿ ಸಂಭವಿಸಲಿದೆ. ಇದರಿಂದಾಗಿ ಮಾವು ಬೆಳೆಗಾರರು ಪರದಾಡುವ ಸ್ಥಿತಿ ಎದುರಾಗುವ ಸಾಧ್ಯತೆಗಳಿವೆ.
ಇನ್ನು ಕುಮಟಾ ಪುರಸಭಾ ವ್ಯಾಪ್ತಿಗೆ ಸಂಬoದಿಸಿದoತೆ ಪಟ್ಟಣ ಪ್ರದೇಶದಲ್ಲಿ ಇದುವರೆಗೆ ಮಳೆಗಾಲದ ಮುಂಜಾಗೃತ ಕ್ರಮವಾಗಿ ರಾಜ ಕಾಲುವೆ, ಗಟಾರ ಮುಂತಾದವುಗಳ ಹೂಳೆತ್ತುವ ಕಾರ್ಯ ಇನ್ನೂ ಪ್ರಾರಂಭಗೊoಡಿಲ್ಲ. ಪಟ್ಟಣದ ಹಲವೆಡೆ ಮಳೆಗಾಲದ ಸಂದರ್ಭದಲ್ಲಿ ಗಟಾರದ ನೀರು ಸರಾಗವಾಗಿ ಹರಿಯದೇ ರಸ್ತೆಯನ್ನು ಆವರಿಸಿ, ವಾಹನ ಸವಾರರು, ಪಾದಾಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಆದ ಕಾರಣ ಸಂಬoಧ ಪಟ್ಟ ಪುರಸಭೆ ಇಲಾಖೆಯು ಮಳೆಗಾಲದ ಮುಂಜಾಗೃತ ಕ್ರಮವಾಗಿ ಆದಷ್ಟು ಶೀಘ್ರವೇ ಗಟಾರಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಬೇಕಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ