Big News
Trending

ಭಟ್ಕಳದಲ್ಲಿ ನಾಮಧಾರಿ ಸಂಚಿಕೆ, ಪ್ರತಿಷ್ಠಾನ ಉದ್ಘಾಟನೆ, ಗೌರವ ಸಮರ್ಪಣೆ ಕಾರ್ಯಕ್ರಮ: ಸಾಧಕರಿಗೆ ಸಂದಿತು ಸನ್ಮಾನ

ಭಟ್ಕಳ: ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ನಾಮಧಾರಿ ಸಭಾಭವನದಲ್ಲಿ ಇಂದು ನಾಮಧಾರಿ ಪ್ರತಿಷ್ಠಾನ (ರಿ) ಉತ್ತರ ಕನ್ನಡ, ಗುರುಮಠ ಭಟ್ಕಳ ಮತ್ತು ಶ್ರೀ ಕ್ಷೇತ್ರ ಹಳೆಕೋಟೆ ಹನುಮಮಂತ ದೇವರ ಸನ್ನಿಧಿ ಹಾಗೂ ನಾಮಧಾರಿ ಸಂಘ ಮಾವಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಾಮಧಾರಿ ಸಂಚಿಕೆ, ಪ್ರತಿಷ್ಠಾನ ಉದ್ಘಾಟನೆ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ಗಮನಸೆಳೆಯುತ್ತಿದೆ ಸಾಂಪ್ರದಾಯಿಕ ಆಲೆಮನೆ : ಇಲ್ಲಿನ ಸಾವಯವ ಬೆಲ್ಲಕ್ಕೆ ಫುಲ್ ಡಿಮ್ಯಾಂಡ್

ಕಾರ್ಯಕ್ರಮದಲ್ಲಿ ನಾಮಧಾರಿ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ದಾರವಾಡ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಈಶ್ವರ್ ನಾಯ್ಕ, ನಾವು ಏನನ್ನು ಬಿತ್ತುತ್ತೆವೆ ಅದನ್ನೇ ಬೆಳೆಯುತ್ತೇವೆ, ರಾಗಿ ಬಿತ್ತಿದರೆ ರಾಗಿಯನ್ನು ಮುಳ್ಳು ಕಂಟೆಯನ್ನು ಬಿತ್ತಿದ್ದರೆ ಮುಳ್ಳುಕಂಟೆಯನ್ನೇ ಬೆಳೆಯುತ್ತೇವೆ, ಹಾಗಾಗಿ ನಮ್ಮ ಸಮಾಜದಲ್ಲಿ ಅಥವಾ ಮನೆಯಲ್ಲಾಗಲಿ ಪ್ರೀತಿ ಬಿತ್ತುವಂತಾದರೆ ಪುನಹಃ ಪ್ರೀತಿ ವಿಶ್ವಾಸವನ್ನೇ ಪಡೆಯಲು ಸಾಧ್ಯ ಎಂದರು.

ನಾಮಧಾರಿ ಪುಸ್ತಕದ ಕುರಿತಂತೆ ಮಾತನಾಡಿದ ಅವರು ಇಂತ ಪುಸ್ತಕವನ್ನು ಸಂಪಾದನೆ ಮಾಡುವುದು ಸುಲಭದ ಮಾತಲ್ಲ, ಪುಸ್ತಕದ ಸಂಪಾದಕರಾದ ಸುಮುಖಾನಂದ ಜಳವಳ್ಳಿಯವರ ತಂಡದ ಪ್ರಯತ್ನವಾಗಿ ಉನ್ನತ ಮಟ್ಟದ ಅಧಿಕಾರಿಗಳ ಮಾಹಿತಿಯನ್ನು, ನಮ್ಮ ಸಮಾಜದ ಹಿನ್ನೆಲೆಯ ಕುರಿತಾದ ಇತಿಹಾಸವನ್ನು ಸಂಗ್ರಹಿಸಿ ಪ್ರಕಟಿಸುವ ಮೂಲಕ ಉತ್ತಮ ಪುಸ್ತಕವನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.

ಇನ್ನೂ ಭಟ್ಕಳದ ಸಿದ್ಧಾರ್ಥ ಸಮೂಹ ಶಿಕ್ಷಣ ಸಂಸ್ಥೆಯ ಪಾಂಶುಪಾಲರಾದ ಅರ್ಚನಾ ನಾಯ್ಕ ಮಾತನಾಡಿ ನಮ್ಮ ಸಮಾಜದಲ್ಲಿ ಪದವಿ ಪಡೆದುಕೊಂಡ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಈಗೀನ ಪಿಳಿಗೆಯಲ್ಲಿ ಸಮಾಜದ ಕುರಿತಾದ ಚಿಂತನೆ ಕಡಿಮೆ ಇದೆ. ಈಗೀನ ಕಾಲದ ಹೆಣ್ಣುಮಕ್ಕಳು ಪ್ಯಾಶನ್ ವಿಷಯದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಬರುವಾಗ ಸಂಪೂರ್ಣವಾಗಿ ತಯಾರಾಗಿ ಬರುತ್ತಾರೆ. ಆದರೆ ಓದುವ ವಿಷಯ ಬಂದಾಗ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ಬಂದಾಗ ಯಾರು ಕೂಡ ಮುಂದೆ ಬರಲ್ಲ ಇದು ಅತ್ಯಂತ ಬೇಸರದ ಸಂಗತಿಯಾಗಿದೆ. ಮನೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದಾಗಲೂ ಮನೆಕೆಲಸವನ್ನು ಕಡಿಮೆ ಅವಧಿಯಲ್ಲಿ ಮುಗಿಸುವ ಅವಕಾಶವಿದ್ದರೂ ಶಿಕ್ಷಣ ಪಡೆದ ಮಹಿಳೆಯರು ಕೂಡ ಅನಾವಶ್ಯಕ ಧಾರಾವಾಹಿ ನೋಡುವುದರಲ್ಲಿ ಮುಳುಗಿರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ವಿದ್ಯಾಸ್ಪಂದನ ಕ್ಯೂ ಆರ್ ಕೋಡ್, ನಾಮಧಾರಿ ಪ್ರತಿಷ್ಠಾನದ ಲೋಗೋ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜೆ.ಡಿ ನಾಯ್ಕ , ಭಟ್ಕಳ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಅರುಣ್ ನಾಯ್ಕ, ಆರ್.ಕೆ ನಾಯ್ಕ, ಸುಬ್ರಾಯ್ ನಾಯ್ಕ, ಮನಮೋಹನ ನಾಯ್ಕ, ಶ್ರೀಧರ್ ನಾಯ್ಕ ಮತ್ತಿತರು ಹಾಜರಿದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button