Follow Us On

WhatsApp Group
Important
Trending

ಪೊಲೀಸರ ಮೇಲೆಯೇ ಹಲ್ಲೆ ಮಾಡಿ “ಇಲಿ ಪಾಷಾಣ” ಸೇವಿಸಿದ: ಅಶ್ಲೀಲ ವಿಡಿಯೋ ಕೇಸ್ ಆರೋಪಿಯ ಹೈಡ್ರಾಮಾ ನೋಡಿ?

ಶಿರಸಿ: ಯುವತಿಯರ ಅಶ್ಲೀಲ ಪೋಟೋ ಎಡಿಟ್ ಮಾಡಿದ ಆರೋಪದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಲು ಪೊಲೀಸರು ತೆರಳಿದ್ದರು. ಆದರೆ, ಈ ವೇಳೆ ಅಲ್ಲಿ ಹೈಡ್ರಾಮಾವೇ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯೊಬ್ಬ ಬಂಧನದ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: ಬಸ್, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಪ್ರಕರಣವೊಂದರಲ್ಲಿ ಆರೋಪಿಗಳಾಗಿರುವ ಅರುಣ ಗೌಡ , ನಾಗವೇಣಿ ಗೌಡ ಮತ್ತು ಚಾಲಚಂದ್ರ ಎಂಬುವವರು ತಲೆ ಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಮೊದಲು ಅರುಣ ಗೌಡ ಎಂಬಾತನ ಬಂಧನಕ್ಕೆ ಆತನ ಮನೆಗೆ ತೆರಳಿದ್ದ ವೇಳೆ ಆರೋಪಿ ಬಂಧನಕ್ಕೆ ಹೋಗಿರುವ ಪೊಲೀಸರ ಮೇಲೆ ಕಲ್ಲು, ಹೆಂಚು ತೂರಿ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನoತರ ಬಂಧನ ಆಗುವುದನ್ನು ಖಾತರಿ ಪಡಿಸಿಕೊಂಡ ಆರೋಪಿ ಬಂಧನದ ಭೀತಿಯಲ್ಲಿ ಮನೆಯಲ್ಲಿದ್ದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೀಆಗಿ ತಕ್ಷಣ ಆರೋಪಿಯನ್ನ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಶಿರಸಿ, ಕುಂದಾಪುರ, ಬನವಾಸಿ ಸೇರಿ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button