Big News
Trending

ಸಕಾಲ ಸೇವೆಯಲ್ಲಿ ರಾಜ್ಯದಲ್ಲೇ ಉತ್ತರಕನ್ನಡ ಮೊದಲ ಸ್ಥಾನ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿನ ನಾಗರೀಕರಿಗೆ ನಿಗದಿತ ಅವಧಿಯಲ್ಲಿ ಸೇವೆ ಸಲ್ಲಿಸುವ ವಿಚಾರದಲ್ಲಿ ಉತ್ತರಕನ್ನಡ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸಕಾಲ ಸೇವೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯು ಮೊದಲ ಸ್ಥಾನ ಪಡೆದಿದೆ. ಏಪ್ರಲ್ ತಿಂಗಳಿನಲ್ಲಿ 40,996 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ 40,479 ಅರ್ಜಿಗಲನ್ನು ವಿಲೇವಾರಿ ಮಾಡಲಾಗಿದೆ. ವಿಲೇವಾರಿ ಮಾಡಲಾಗಿರುವ ಅರ್ಜಿಗಳಲ್ಲಿ 39,696 ಅರ್ಜಿಗಳನ್ನು ಅವಧಿಗೂ ಮೊದಲೇ ವಿಲೇವಾರಿ ಮಾಡುವ ಮೂಲಕ ಶೇಕಡಾ 98.07 ಪ್ರಗತಿ ಸಾಧಿಸಲಾಗಿದೆ. ಚುನಾವಣೆ ಹಾಗೂ ಬರ ನಿರ್ವಹಣೆಯ ಸಂದರ್ಭದಲ್ಲಿಯೂ ಸಹ ಸಾರ್ವಜನಿಕರಿಗೆ ಉತ್ತಮವಾದ ಸೇವೆಯನ್ನು ನೀಡಲಾಗಿದೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ. ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್ಕರ್ ಅವರು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button