Focus News
Trending

ಈ ಬಾರಿ ಭಟ್ಕಳದ ಕರಿಕಲ್ ದ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ಲೋಕ ಕಲ್ಯಾಣಕ್ಕಾಗಿ ಚಾತುರ್ಮಾಸ್ಯವನ್ನು ಈ ಬಾರಿ ಭಟ್ಕಳದ ಕರಿಕಲ್ ದ್ಯಾನ ಮಂದಿರದಲ್ಲಿ ಆಚರಣೆ ಮಾಡಲು ನಿರ್ಧರಿಸಿದ್ದು ಇದಕ್ಕೆ ಎಲ್ಲ ಸದ್ಭಕ್ತರು ಸಹಕಾರ ನೀಡಬೇಕೆಂದು ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ತಾಲೂಕಿನ ಆಸರಕೇರಿಯ ನಾಮಧಾರಿ ಗುರುಮಠದ ಸಭಾಭವನದಲ್ಲಿ ಭಟ್ಕಳದ ಕರಿಕಲ್ ದ್ಯಾನ ಮಂದಿರದಲ್ಲಿ ನಡೆಯುವ ಚಾತುರ್ಮಾಸ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅವರು ನಮ್ಮ ದೇಶದಲ್ಲಿ ತಲಾತಲಾಂತರದಿಂದ ಚಾತುರ್ಮಾಸ ಆಚರಣೆಯ ಪದ್ಧತಿ ಇದ್ದು ಮಹಾಭಾರತದಲ್ಲಿಯೂ ಚಾತುರ್ಮಾಸ್ಯದ ಆಚರಣೆಯ ಬಗ್ಗೆ ಉಲ್ಲೇಖವಿದೆ. ಎಂದರು.

ಗುರುಮಠದ ಗೌರವಾಧ್ಯಕ್ಷರಾದ ಕೃಷ್ಣ ನಾಯ್ಕ ಮಾತನಾಡಿ ಜಿಲ್ಲೆಯಲ್ಲೇ ಪ್ರಥಮಭಾರಿಗೆ ಹಿಂದುಳಿದ ವರ್ಗದವರು ಚಾತುರ್ಮಾಸ್ಯವನ್ನು ಜೂನ್ 21 ರಂದು ಕರಿಕಲ್ ದ್ಯಾನ ಮಂದಿರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಆಚರಿಸಿಕೊಳ್ಳುತ್ತಿದ್ದು ಇದಕ್ಕೆ ಸಮಾಜದ ಪ್ರತಿ ಕೂಟದವರು ಸಹಕಾರ ನೀಡಬೇಕೆಂದರು. ಶ್ರೀರಾಮಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಸ್ವಾಗತಿಸಿದರು. ಮಂಜುನಾಥ ನಾಯ್ಕ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ, ಹಿರಿಯರಾದ ಡಿ.ಬಿ.ನಾಯ್ಕ, ಪ್ರಮುಖರಾದ ಎಸ್.ಎಂ.ನಾಯ್ಕ, ಈರಪ್ಪ ಗರ್ಡಿಕರ, ಕೆ.ಆರ್. ನಾಯ್ಕ, ಈಶ್ವರ ನಾಯ್ಕ, ರಾಜೇಶ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ವಿಠ್ಠಲ್ ನಾಯ್ಕ, ಭವಾನಿಶಂಕರ ನಾಯ್ಕ, ಸತೀಶಕುಮಾರ ನಾಯ್ಕ,ಶ್ರೀಕಾಂತ ನಾಯ್ಕ,ಡಿ.ಎಲ್.ನಾಯ್ಕ, ಶಿವರಾಮ್ ನಾಯ್ಕ, ಎಂ.ಕೆ.ನಾಯ್ಕ, ವಿವಿಧ ಕೂಟಗಳ ಪ್ರಮುಖರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button