13.20 PM: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಭರ್ಜರಿ ಜಯಭೇರಿ. 3 ಲಕ್ಷದ 31 ಸಾವಿರದ ಮತಗಳ ಅಂತರದ ಗೆಲುವು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿದ್ದು ಮತಗಳು 7,61,795 (+ 3,31,754). ಕಾಂಗ್ರೆಸ್ಸಿನ ಅಂಜಲಿ ನಿಂಬಾಳ್ಕರ್‌ಗೆ ಬಿದ್ದ ಮತಗಳ ಸಂಖ್ಯೆ 4,30,041.
13.24 PM: ಗೆಲುವಿನತ್ತ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ. ಅಧಿಕೃತ ಘೋಷಣೆಯೊಂದೇ ಬಾಕಿ. ಪ್ರತಿ ಸುತ್ತಿನಲ್ಲೂ ಲೀಡ್ ಗಳ ಸಂಖ್ಯೆ ಗಣನೀಯ ಎರಿಕೆ. 2 ಲಕ್ಷದ 90 ಸಾವಿರ ಲೀಡ್. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿದ್ದ ಓಟುಗಳು 6,75,257 (+ 2,91,903) . ಅಂಜಲಿ ನಿಂಬಾಳ್ಕರ್ ಗೆ ಬಿದ್ದ ಓಟುಗಳು 3,83,354
12.46 PM: ಗೆಲುವಿನತ್ತ ವಿಶ್ವೇಶ್ವರ ಹೆಗಡೆ ಕಾಗೇರಿ. 2 ಲಕ್ಷದ 65 ಸಾವಿರ ಲೀಡ್. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿದ್ದ ಓಟುಗಳು 5,96,336 (+ 2,65,401) . ಅಂಜಲಿ ನಿಂಬಾಳ್ಕರ್ ಗೆ ಬಿದ್ದ ಓಟುಗಳು 3,30,935
12.21 PM: ಗೆಲುವಿನತ್ತ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ. 2 ಲಕ್ಷದ 33 ಸಾವಿರ ಲೀಡ್. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿದ್ದ ಓಟುಗಳು 5,32,306 (+ 2,33,205) . ಅಂಜಲಿ ನಿಂಬಾಳ್ಕರ್ ಗೆ ಬಿದ್ದ ಓಟುಗಳು 2,99,101
12.05 PM: ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೆ ಭಾರೀ ಹಿನ್ನಡೆ. ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 2 ಲಕ್ಷದ 15 ಸಾವಿರ ಮತಗಳ ಮುನ್ನಡೆ . ಕಾಗೇರಿಗೆ ಬಿದ್ದ ಓಟುಗಳು 4,78,578 (+ 215239). ಅಂಜಲಿ ನಿಂಬಾಳ್ಕರ್ ಗೆ ಬಿದ್ದ ಓಟುಗಳು 2,63,339
11.09 AM: 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೆ ಭಾರೀ ಹಿನ್ನಡೆ. 1 ಲಕ್ಷದ 75 ಸಾವಿರ ಮತಗಳ ಅಂತರದಿoದ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ. ಕಾಗೇರಿಗೆ ಬಿದ್ದ ಓಟುಗಳು 3,86,193 (+ 175341). ಅಂಜಲಿ ನಿಂಬಾಳ್ಕರ್ ಗೆ ಬಿದ್ದ ಓಟುಗಳು 2,10,852.
11.09 AM: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಭಾರೀ ಮುನ್ನಡೆ. 3,24,448 ಮತಗಳು (+ 1, 51,530). ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೆ 1,72,918 ಮತಗಳು.
10.21 AM: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ 1 ಲಕ್ಷ ಮತಗಳ ಭಾರೀ ಮುನ್ನಡೆ. 2,27,960 (+ 1,15,024). ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೆ 1,12,936 ಮತಗಳು.
10.07 AM: ವಿಶ್ವೇಶ್ವರ ಹೆಗಡೆ ಕಾಗೇರಿಗೆ 1 ಲಕ್ಷದ 82 ಸಾವಿರ ಮತಗಳು . ಒಟ್ಟು 93 ಸಾವಿರಗಳ ಲೀಡ್. ಅಂಜಲಿಗೆ ಹಿನ್ನಡೆ
9.51 AM: ನಿರಂತರವಾಗಿ ಮುನ್ನಡೆ ಕಾಯ್ದುಕೊಂಡ ಕಾಗೇರಿ. 76 ಸಾವಿರಕ್ಕೂ ಅಧಿಕ ಲೀಡ್.. ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ ಅಭ್ಯರ್ಥಿ.
9.32 AM: ವಿಶ್ವೇಶ್ವರ ಹೆಗಡೆ ಕಾಗೇರಿಗೆ 65 ಸಾವಿರಕ್ಕೂ ಹೆಚ್ಚು ಲೀಡ್.. 1 ಲಕ್ಷದ 22 ಸಾವಿರ ಮತಗಳು. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೆ ಭಾರೀ ಹಿನ್ನಡೆ.
9.32 AM: ಭಾರೀ ಮತಗಳ ಮುನ್ನಡೆಯತ್ತ ವಿಶ್ವೇಶ್ವರ ಹೆಗಡೆ ಕಾಗೇರಿ. 50 ಸಾವಿರಕ್ಕೂ ಅಧಿಕ ಲೀಡ್ 92 ಸಾವಿರಕ್ಕೂ ಹೆಚ್ಚು ಮತ ಪಡೆದ ಕಾಗೇರಿ.
9.19 AM: ವಿಶ್ವೇಶ್ವರ ಹೆಗಡೆ ಕಾಗೇರಿಗೆ 76,198 ಮತಗಳು. 42 ಸಾವಿರಕ್ಕೂ ಅಧಿಕ ಲೀಡ್. ಅಂಜಲಿಗೆ 34,042 ಮತಗಳು.
9.07 AM: ವಿಶ್ವೇಶ್ವರ ಹೆಗಡೆ ಕಾಗೇರಿ 2ನೇ ಸುತ್ತಿನಲ್ಲಿ 25598 ಮತಗಳ ಮುನ್ನಡೆ. ಒಟ್ಟು 43 ಸಾವಿರ ಮತಗಳು ಕಾಗೇರಿಗೆ. ಅಂಜಲಿಗೆ 17 ಸಾವಿರ.
8.59 AM: ಕಾಗೇರಿಗೆ 22590 ಮತಗಳು, ಅಂಜಲಿ ನಿಂಬಾಳ್ಕರ್ ಗೆ 9252 ಓಟುಗಳು. 13 ಸಾವಿರಕ್ಕೂ ಅಧಿಕ ಮತಗಳ ಅಂತರದಿoದ ಹಿನ್ನಡೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ
8.48 AM: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಭಾರೀ ಮುನ್ನಡೆ: 15,691 ಮತಗಳು. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ 6,230 ಮತಗಳು, 9461 ಮತಗಳ ಮುನ್ನಡೆ. ( 1st Round )
8.17 AM: ಅಂಚೆ ಮತ ಎಣಿಕೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ
8.00 AM: ಆರಂಭವಾಗಿದೆ ಮತ ಎಣಿಕೆ: ಮೊದಲಿಗೆ ಅಂಚೆ ಮತ ಎಣಿಕೆಗಳು ಆರಂಭ
7.15 AM: ಮತಗಟ್ಟೆಗೆ ಸಂಬoಧಿಸಿದ ಅಧಿಕಾರಿಗಳ ಆಗಮನ: ಎಲ್ಲೆಡೆ ಬಿಗಿ ಭದ್ರತೆ, ತಪಾಸಣೆ
ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಕುಮಟಾ ತಾಲೂಕಿನ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನಿಗಳು, ಕಾರ್ಯಕರ್ತರು ಹಾಗು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು, ಕಾಲೇಜು ಸುತ್ತಮುತ್ತ ಸೇರಿದ್ದು, ಫಲಿತಾಂಶದ ಟ್ರೆಂಡ್ ತಿಳಿಯಲು ಕಾಯುತ್ತಿದ್ದಾರೆ.
ಮತ ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಪ್ರತಿಯೊಂದು ಟೇಬಲ್‌ಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಎಣಿಕೆಯನ್ನು ಸುಲಲಿತವಾಗಿ ನಡೆಸಲು ಸಿಬ್ಬಂದಿಗಳಿಗೆ ಎರಡು ಹಂತದ ತರಬೇತಿಯನ್ನು ಕೂಡಾ ನೀಡಲಾಗಿದೆ. ಮತ ಎಣಿಕೆಯ ಕಾರ್ಯದ ವೀಕಣೆಗಾಗಿ ಕಾಂಗ್ರೆಸ್‌ನ 136, ಬಿಜೆಪಿಯ 141, ಎಂಇಎಸ್‌ನ 18 ಜನ ಸೇರಿ 300 ಕ್ಕೂ ಅಧಿಕ ಏಜೆಂಟರುಗಳಿಗೆ ಕೌಂಟಿoಗ್ ಪಾಸ್ ನೀಡಲಾಗಿದೆ. ಮತ ಎಣಿಕೆಯ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿ ಕ್ಷೇತ್ರಕ್ಕೆ ಒಂದರoತೆ ಸಮವಸ್ತç ನೀಡಲಾಗಿದೆ.
ಉದ್ಯೋಗಾವಕಾಶದ ಕುರಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟಿಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್