Follow Us On

Google News
Important
Trending

ತಡೆಯಲು ಬಂದವನಿಗೆ ಥಳಿತ: ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಸಿದ್ದಾಪುರ: ಪಟ್ಟಣದ ಹೊಸ ನಿಲ್ದಾಣ ಬಳಿ ವ್ಯಕ್ತಿಯೋರ್ವ ಪಟಾಕಿ ಸಿಡಿಸಿ ವಾಹನ ಸವಾರರಿಗೆ ತೊಂದರೆ ಪಡಿಸುತ್ತಿರುವಾಗ ತಡೆಯಲು ಬಂದವನಿಗೆ ಥಳಿಸಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಲೋಕ ಸಭಾಚುನಾವಣೆಯಲ್ಲಿ ಕಾಗೇರಿ ಜಯ ಗಳಿಸಿದ ಹಿನ್ನಲೆ ಪಟಾಕಿ ಹೊಡೆಯುತ್ತಿದ್ದನು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಹೆಚ್ಚು ವಾಹನ ಸಂಚರಿಸಿತ್ತಿರುತ್ತವೆ .

ಹೀಗಾಗಿ ಪಟಾಕಿ ಹೊಡೆಯ ಬೇಡ ಎಂದು ಅಲ್ಲಿದ್ದ ಸಾರ್ವಜನಿಕರು ಹೇಳಿದ್ದಾರೆ ಎನ್ನಲಾಗಿದೆ. ಹೊಡೆತ ತಿಂದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಕೊಂಡಾಗ ಸುತ್ತಮುತ್ತ ಇರುವವರು ಬಂದು ಹೊಡೆದಾಟ ತಪ್ಪಿಸಿ ಪೊಲೀಸರಿಗೆ ಕರೆ ಮಾಡಿ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಪಟಾಕಿ ಸಿಡಿಸಿ ಅವಾಂತರ ಸೃಷ್ಟಿಸಿದ ವ್ಯಕ್ತಿ ವಿಶ್ವೇಶ್ವರ ಹೆಗಡೆ ಹೊಸಗದ್ದೆ ಮೂಲದವನು ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button
Idagunji Mahaganapati Chandavar Hanuman