ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಒಟ್ಟು 3 ಸಾವಿರ ಹುದ್ದೆಗಳಿಗೆ ( Bank Jobs) ನೇಮಕಾತಿ ನಡೆಯಲಿದೆ. ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಆಕರ್ಷಕ ವೇತನ ನಿಗದಿಯಾಗಿದೆ. ಅಧಿಸೂಚನೆಯಲ್ಲಿನ ಮಾಹಿತಿಯಂತೆ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
( Bank Jobs) ಅರ್ಜಿ ಸಲಿಕೆ ಜೂನ್ 06 , 2024 ರಿಂದ ಆರಂಭವಾಗಿದ್ದು, ಅರ್ಜಿ ಸಲಿಸಲು ಕೊನೆಯ ದಿನಾಂಕ ಜೂನ್ 17 , 2024 ಆಗಿದೆ. ಆನ್‌ಲೈನ್ ಲಿಖಿತ ಪರೀಕ್ಷೆ ಹಾಗು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಜೂನ್ 23, 2024 ಸಂಭಾವ್ಯ ಪರೀಕ್ಷಾ ದಿನಾಂಕವಾಗಿದೆ.
ಇಲಾಖೆ | ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ |
ಒಟ್ಟು ಹುದ್ದೆಗಳು | 3 ಸಾವಿರ |
ಹುದ್ದೆಗಳ ಹೆಸರು | ಅಪ್ರೆಂಟಿಸ್ |
ಅರ್ಜಿ ಸಲ್ಲಿಸುವ ವಿಧಾನ | Online |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಜೂನ್ 17 , 2024 |
ಒಟ್ಟು 3 ಸಾವಿರ ಹುದ್ದೆಗಳಲ್ಲಿ ಕರ್ನಾಟಕದಲ್ಲಿ 110 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಮತ್ತಯ ಗರಿಷ್ಠ 28 ವರ್ಷ ವಯೋಮಿತಿ ನಿಗದಿಯಾಗಿದೆ. ಓಬಿಸಿಗೆ 3 ವರ್ಷ, ಎಸ್‌ಸಿ,ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, PWS ಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಕೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಸೂಚನೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಸoಭಾವ್ಯ ಪರೀಕ್ಷೆ | . ಜೂನ್ 23, 2024 |
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್