Important
Trending

ಶತಾಯುಷಿ ನೆವಳಸೆ ಹಮ್ಮು ಗೌಡ ವಿಧಿವಶ: ಯಕ್ಷ ರಂಗದಲ್ಲಿಯೂ ಛಾಪು ಮೂಡಿಸಿದ್ದ ಕಲಾ ಸಿರಿವಂತ

ಅಂಕೋಲಾ : ತಾಲೂಕಿನ ಬೆರಳೆಣಿಕೆಯ ಅತೀ ಹಿರಿಯ ಜೀವಗಳಲ್ಲಿ ಒಬ್ಬರಾಗಿದ್ದ, ಹಿಲ್ಲೂರು ಗ್ರಾ.ಪಂ ವ್ಯಾಪ್ತಿಯ ತಿಂಗಳ ಬೈಲ್ ನ ಶತಾಯುಷಿ ನೆವಳಸೆ ಮನೆ ಹಮ್ಮು ಶಿವು ಗೌಡ (101) ಜೂನ್ 14 ರಂದು ಬೆಳಿಗ್ಗೆ ಸ್ವ ಗೃಹದಲ್ಲಿ ವಿಧಿವಶರಾಗಿದ್ದಾರೆ. ಕೌಟುಂಬಿಕ ಬಡತನ ಮತ್ತಿತರ ಕಾರಣಗಳಿಂದ ಅಂದಿನ ಕಾಲದಲ್ಲಿ ಓದು ಬರಹ ಕಲಿಯಲು,ಹಮ್ಮು ಗೌಡ ಅವರಿಗೆ ಸಾಧ್ಯವಾಗಿರಲಿಲ್ಲವಾದರೂ, ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ,ತಮ್ಮ ಕಲಾ ಸಿರಿವಂತಿಕೆಯ ಮೂಲಕ ಯಕ್ಷ ಪ್ರೇಮಿಗಳ ಮನಸೂರೆಗೊಂಡಿದ್ದರು.

ಇದನ್ನೂ ಓದಿ: Bank of Baroda Recruitment: 627 ಹುದ್ದೆಗಳಿಗೆ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ

ಸುತ್ತಮುತ್ತಲಿನ ಸರ್ವ ಸಮಾಜದ ಆತ್ಮೀಯ ಒಡನಾಟ ಹೊಂದಿದ್ದ ಇವರು,ಇತರರನ್ನು ನಗಿಸುವ ಮೂಲಕ ಹಾಸ್ಯಗಾರ ಹಮ್ಮು ಎಂಬಷ್ಟರ ಮಟ್ಟಿಗೆ ಜನ ಮೆಚ್ಚುಗೆ ಪಡೆದಿದ್ದರು.ಅಪಾರ ದೈವಭಕ್ತರಾಗಿದ್ದ ಇವರು,ಹತ್ತಾರು ವಿಧಾಯಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು,ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರು. ವಯಸ್ಸು ನೂರು ದಾಟಿದರೂ ಕೊನೆಯವರೆಗೂ ಯಾರಿಗೂ ಹೊರೆಯಾಗದೇ, ಭಾರವಾಗದೇ ಸಕ್ರೀಯವಾಗಿಯೇ ಬದುಕಿ, ಬಾಳಿ,ತಮ್ಮ ಕಟ್ಟುಮಸ್ತಾದ ದೇಹ ಹಾಗೂ ಸರಳ ಆರೋಗ್ಯ ಭಾಗ್ಯ ಸೂತ್ರದ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದರು.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿಯೂ ಮನೆಯಿಂದಲೇ ಮತದಾನ ಮಾಡಿ,ತಮ್ಮ ಹಕ್ಕು ಚಲಾಯಿಸಿದ್ದರು. ವಯೋ ಸಹಜ ಸಾವು ಎನ್ನುವಂತೆ ಕೊನೆಗೂ ಈ ಹಿರಿಯ ಜೀವ ಕಾಲನಲ್ಲಿ ಲೀನವಾಗಿದೆ.ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಗೌಡರ ಕುಟುಂಬದ ಒಡನಾಡಿಗಳಾಗಿದ್ದ ರಮೇಶ ನಾಯಕ (ಬುಡ್ಡಿ ) ಹಿಲ್ಲೂರು, ಮತ್ತಿತರರು ಹಾಗೂ ಬಾಸಗೋಡ, ಸೂರ್ವೆ ಮತ್ತಿ ತರಡೆಯ ಕೆಲ ಪ್ರಮುಖರು ಸೇರಿದಂತೆ ನೂರಾರು ಜನ ಮೃತರ ಅಂತಿಮ ದರ್ಶನ ಪಡೆದುಕೊಂಡು,ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ತಾಲೂಕಿನ ಹಾಗೂ ಜಿಲ್ಲೆಯ ಹಲವು ಧೂರೀಣರು, ಗೌಡ ಕುಟುಂಬದ ಹಾಗೂ ಸಮಾಜದ ಹಿರಿ-ಕಿರಿಯರು, ಇತರೆ ಸಮಾಜದ ಪ್ರಮುಖರನೇಕರ, ಹಿರಿಯರಾದ ಹಮ್ಮು ಗೌಡ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button