Important
Trending

ಕೃಷಿ ಬದುಕು ಅರಸಿ ಹಳ್ಳಿಗೆ ಬಂದ ಸಾಪ್ಟವೇರ್ ಎಂಜಿನಿಯರ್ ವಿಧಿಯಾಟಕ್ಕೆ ಬಲಿ

ಯಲ್ಲಾಪುರ: ತಾಲೂಕಿನ ಭರತನಹಳ್ಳಿಯ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಸುಮಂತ ಮಹಾಬಲೇಶ್ವರ ಹೆಗಡೆ ಇವರು ದ್ವಿಚಕ್ರ ವಾಹನದಲ್ಲಿ ಶಿರಸಿಯಿಂದ ಬರುವಾಗ ಯಲ್ಲಾಪುರ ಮಾರ್ಗದ ತುಡುಗುಣಿ ಸೇತುವೆಯ ಬಳಿ ಅಪಘಾತಕ್ಕೀಡಾಗಿ ನಿಧನರಾಗಿದ್ದಾರೆ. ಸವಿತಾ ಮತ್ತು ಮಾಹಾಲೇಶ್ವರ ಪರಶುರಾಮ ಹೆಗಡೆ ದಂಪತಿಗಳ ಪುತ್ರ ಸುಮಂತ ಮಹಾಬಲೇಶ್ವರ ಹೆಗಡೆ ಇವರು ಮೂಲತಃ ಕೃಷಿ ಕುಟುಂಬದವರಾಗಿದ್ದು, ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದರೂ ಕೂಡ ಕೃಷಿ ಬದುಕನ್ನು ಅರಸಿಕೊಂಡು ತಂದೆಯೊoದಿಗೆ ಹಳ್ಳಿಯಲ್ಲಿ ನೆಲೆಸಿ, ಕೃಷಿ ಜೀವನ ನಡೆಸುತ್ತಿದ್ದರು. ಇದೀಗ ಶಿರಸಿಯಿಂದ ಬರುವಾಗ ತುಡುಗುಣಿ ಸಮೀಪ ರಸ್ತೆ ಅಪಘಾತವೊಂದರಲ್ಲಿ ಅಕಾಲಿಕವಾಗಿ ನಿಧನರಾಗಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button