Important
Trending

ಹೆಚ್ಚಿನ ಪ್ರಖರತೆಯುಳ್ಳ ಎಲ್‌ಇಡಿ ಲೈಟ್ ಬಳಸಿದ್ರೆ ಹುಷಾರ್! ಸವಾರನಿಗೆ ಬಿತ್ತು 5 ಸಾವಿರ ರೂಪಾಯಿ ದಂಡ

ಶಿರಸಿ: ಹೆಚ್ಚಿನ ಪ್ರಖರತೆಯುಳ್ಳ ಎಲ್‌ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ಚಲಾಯಿಸುವ ವಾಹನಗಳನ್ನು ತಪಾಸಣೆ ನಡೆಸಿದ ಶಿರಸಿ ನಗರ ಠಾಣೆಯ ಪೊಲೀಸರು ವಾಹನ ಸವಾರರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ಪ್ರಖರತೆಯುಳ್ಳ ಎಲ್‌ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುವ ಪರಿಣಾಮವಾಗಿ ಎದುರು ಬರುವ ವಾಹನ ಸವಾರರಿಗೆ ಕಣ್ಣುಕುಕ್ಕಿ ರಸ್ತೆ ಅಪಘಾತಗಳು ಸಂಭವಿಸುತ್ತಿದೆ.

ಇದನ್ನೂ ಓದಿ: ಮಂಗಳಮುಖಿ ವೇಷ ಧರಿಸಿದ ಪುರುಷ: ಅಸಲಿ ಮಂಗಳಮುಖಿಯರು ಮಾಡಿದ್ದೇನು ನೋಡಿ?

ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಶಿರಸಿ ನಗರದ ಬಿಡ್ಕಿಬೈಲ್‌ನಲ್ಲಿ ಶಿರಸಿ ಪೊಲೀಸರು ವಾಹನಗಳ ತಪಾಸಣೆ ನಡೆಸಿ ಎಲ್‌ಇಡಿ ಲೈಟ್ ಗಳನ್ನು ಅಳವಡಿಸಿದ್ದ ವಾಹನ ಸವಾರರ ಮೇಲೆ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, 5 ಸಾವಿರ ರೂಪಾಯಿ ದಂಡ ವಿಧಿಸಿದರು.

ವಿಸ್ಮಯ ನ್ಯೂಸ್, ಶಿರಸಿ

Back to top button