Big News
Trending

ವೆಂಕಟೇಶ್ವರ ಕೌಶಲಾಭಿವೃದ್ಧಿ ಕಂಪ್ಯೂಟರ್ ತರಬೇತಿ ಕೇಂದ್ರದ ಹೆಚ್ಚುವರಿ ಕೇಂದ್ರ ಶುಭಾರಂಭ

ಭಟ್ಕಳ: ತಾಲೂಕಿನ ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿಯ ಆಶ್ರಯದಲ್ಲಿ ಶ್ರೀ ವೆಂಕಟೇಶ್ವರ ಕೌಶಲಾಭಿವೃದ್ಧಿ ಕಂಪ್ಯೂಟರ್ ತರಬೇತಿ ಕೇಂದ್ರದ ಹೆಚ್ಚುವರಿ ಕೇಂದ್ರವನ್ನು ದೇವಸ್ಥಾನದ ಅಧ್ಯಕ್ಷರಾದ ಅರುಣ್ ನಾಯ್ಕ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಟ್ಕಳದ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ಈ ಹಿಂದೆ ಕೇವಲ ಮೂರ್ನಾಲ್ಕು ಕಂಪ್ಯೂಟರ್ ನೊಂದಿಗೆ ಈ ಕೇಂದ್ರ ಆರಂಭವಾಯಿತು . ಆ ನಂತರದಲ್ಲಿ ಶ್ರೀ ವೆಂಕಟೇಶ್ವರ ಕೌಶಲಾಭಿವೃದ್ಧಿ ಕಂಪ್ಯೂಟರ್ ತರಬೇತಿ ಕೇಂದ್ರ ಎಂಬ ಹೆಸರಿನಲ್ಲಿ ಕೇಂದ್ರವನ್ನು ನೋಂದಣಿ ಮಾಡಿಸಲಾಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಇದೀಗ ದಾನಿಗಳ ನೆರವಿನೊಂದಿಗೆ ಹೆಚ್ಚುವರಿಯಾಗಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಮುಂಬರುವ ದಿನಗಳಲ್ಲಿ ಕಂಪ್ಯೂಟರ್ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಎಂದರು.

ಬೈಟ್: ಕೃಷ್ಣ ನಾಯ್ಕ, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷರು ಕಾರ್ಯಕ್ರಮದಲ್ಲಿ, ಮಾದೇವ ನಾಯ್ಕ ಈರಪ್ಪ ನಾಯ್ಕ, ಮೋಹನ್ ನಾಯ್ಕ, ಡಿ.ಬಿ ನಾಯ್ಕ, ಡಿ.ಎಲ್ ನಾಯ್ಕ ಎಮ್ ಕೆ ನಾಯ್ಕ ಮತ್ತಿತರರು ಇದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ ಭಟ್ಕಳ

Back to top button