Important
Trending

ಪ್ರಯಾಣಿಸುತ್ತಿರುವಾಗ ಬಸ್ಸಿನಲ್ಲೇ ಹೃದಯಾಘಾತ: ವ್ಯಕ್ತಿ ಸಾವು

ಕಾರವಾರ: ಹೃದಯಾಘಾತ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬನಿಗೆ ಹೃದಯಾಘಾತವಾಗಿದ್ದು, ಅಲ್ಲೇ ಮೃತಪಟ್ಟಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ. ಹಡಿನಬಾಳದ ಕೃಷ್ಣ ಶೆಟ್ಟಿ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

ನಾಗರಿಕರ ನಿದ್ದೆ ಗೆಡಿಸುತ್ತಿರುವ ಗೆಜ್ಜೆಯ ಝಲ್ ಝಲ್ಲ್ ಸದ್ದು! ಬಾವಿ ಜತೆ ಥಳಕು ಹಾಕಿಕೊಂಡ ಕಥೆ-ವ್ಯಥೆ

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕ ಕೃಷ್ಣ ಶೆಟ್ಟಿ ಕುಸಿದುಬಿದ್ದಿದ್ದಾರೆ. ಈ ವೇಳೆ ಬಸ್ ಚಾಲಕ ಎಲ್ಲಾ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿ ನೇರವಾಗಿ ಬಸ್ಸನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ತಕ್ಷಣ ವೈದ್ಯರು ತಪಾಸಣೆ ಮಾಡಿದ್ದು, ಅಷ್ಟರಲ್ಲೆ ಆತ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button