Important
Trending

ಗಬ್ಬು ನಾರುತ್ತಿದೆ ಶೌಚಾಲಯ: ಕಟ್ಟಡಗಳ ಸುತ್ತಮುತ್ತ ಕೊಳಚೆ ನೀರು, ತ್ಯಾಜ್ಯ

ಹೊನ್ನಾವರ: ಪಟ್ಟಣದ ಕೆಲವೆಡೆ ಶೌಚಾಲಯ, ಮೂತ್ರಾಲಯಗಳಿದ್ದರೂ ದುರ್ವಾಸನೆ ಬರುತ್ತಿದೆ ಎಂಬ ಕಾರಣಕ್ಕೆ ಸಾರ್ವಜನಿಕರು ಅವುಗಳ ಬಳಕೆ ಮಾಡುವುದೂ ಕಡಿಮೆಯಾಗುತ್ತಿದೆ. ಇದರಿಂದ ಹೊನ್ನಾವರ ಪಟ್ಟಣದಲ್ಲಿ ಬಹುತೇಕ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ. ಬಾಜಾರ್‌ನಲ್ಲಿನ ಶೌಚಾಲಯ ತೀರ ದುಃಸ್ಥಿತಿಯಲ್ಲಿರುವುದರಿಂದ ಹೊಸದಾಗಿ ಅಲ್ಲಿ ಶೌಚಾಲಯ ನಿರ್ಮಾಣ ಮಾಡುವ ಅವಶ್ಯಕತೆ ಇದೆ.ನಿರ್ವಹಣೆ ಇಲ್ಲದೆ ಕಟ್ಟಡಗಳ ಸುತ್ತಮುತ್ತ ಕೊಳಚೆ, ತ್ಯಾಜ್ಯ ಸಂಗ್ರಹವಾಗುತ್ತಿದೆ. ಸಾರ್ವಜನಿಕ ಶೌಚಾಲಯಗಳು ಹಾಗೂ ಮೂತ್ರಾಲಯಗಳು ಸ್ವಚ್ಛತೆಯಿಲ್ಲದ ಕಾರಣ ಜನರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.

ಈ ಬಗ್ಗೆ ಸಾರ್ವಜನಿಕರಾದ ಸದಾನಂದ ಅವರು ಮಾತನಾಡಿ, ಇಲ್ಲಿ ಮೂತ್ರಖಾನೆಗೆ ಹೋದರೆ ರೋಗಗಳು ಬರುತ್ತೇನೊ ಅಂತ ಯಾರು ಸಹ ಹೋಗುವುದಿಲ್ಲ. ಗಬ್ಬುವಾಸನೆ ಆಗ್ಬಿಟ್ಟಿದೆ. ಪಟ್ಟಣ ಪಂಚಾಯತಿಯವರು ಪ್ರತಿದಿನ ಸ್ವಚ್ಛತೆ ಮಾಡುವುದಿಲ್ಲ . ಈ ಬಗ್ಗೆ ಸಂಬAಧಿಸದವರಿಗೆ ಮನವಿ ಕೊಟ್ಟಿದ್ದರು ಸಹ ಪ್ರಯೋಜನ ಆಗಿಲ್ಲ ಎಂದರು.

ಇನ್ನೊರ್ವ ಪಟ್ಟಣದ ಅಂಗಡಿಕಾರ ರಾಮಚಂದ್ರ ಅವರು ಮಾತನಾಡಿ ಶೌಚಾಲಯ ಶಾಲೆಯ ಹತ್ತಿರ ಇರುವುದರಿಂದ ಸಣ್ಣ ಮಕ್ಕಳಿಗೆ ಸಾಂಕ್ರಾಮಿಕ ರೋಗ, ಡೆಂಗ್ಯೂ ಜ್ವರ ಬರುವ ಸಾಧ್ಯತೆ ಇರುತ್ತದೆ. ಆದರೆ ಪಟ್ಟಣ ಪಂಚಾಯಿತಿಯವರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ವಿಸ್ಮಯ ನ್ಯೂಸ್ ವಿವೇಕ್ ಶೇಟ್, ಭಟ್ಕಳ

Back to top button