ಸಾಮಾಜಿಕ ಜಾಗೃತಿ: ಗಮನಸೆಳೆದ ಬೀದಿ ನಾಟಕ

ಭಟ್ಕಳ: ತಾಲೂಕಿನ ಕೆಕ್ಕೋಡ್ ನಲ್ಲಿ ಇಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಸನ್ನಿಧಿ ಜ್ಞಾನವಿಕಾಶ ಸಂಘದ ಸಹಯೋಗದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮ ಜರುಗಿತು. ಈ ಕುರಿತಂತೆ ನಮ್ಮ ವಾಹಿನಿಯ ಜತೆ ಮಾತನಾಡಿದ ಸಂಘದ ಸಮನ್ವಯಾಧಿಕಾರಿ ವಿನೋದಾ ಬಾಲಚಂದ್ರ “ನಾವು ಹಿಂದಿನಿoದಲೂ ವರದಕ್ಷಿಣೆ, ನೀರಿನ ಸದ್ಬಳಕೆ, ಕುಡಿತದ ಸಮಸ್ಯೆಗಳು ಇವೆ ಮುಂತಾದ ವಿಷಯಗಳ ಮೇಲೆ ಹಳ್ಳಿ ಜನರಲ್ಲಿ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾಟಕದ ಮೂಲಕ ನಾವು ವಿಚಾರಧಾರೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಹುದಾಗಿದೆ ಎಂದರು.

ಅಮದಳ್ಳಿಯ ಭಂಟದೇವ ನಾಟಕ ಸಂಘ ಈ ಬೀದಿ ನಾಟಕವನ್ನು ನಡೆಸಿಕೊಟ್ಟಿದ್ದು. ಕಲಾವಿಧರ ಅಭಿನಯ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದು ಸುಳ್ಳಲ್ಲ. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಗಣೇಶ ನಾಯ್ಕ ಸಮನ್ವಯಾಧಿಕಾರಿ, ವಿನೋಧಾ ಬಾಲಚಂದ್ರ, ಸೇವಾಪ್ರತಿನಿಧಿ ದಾಮೋದರ್, ಉಮಾಕಾಂತ ಖಾರ್ವಿ, ಈಶ್ವರ ನಾಯ್ಕ, ಮತ್ತಿತರರು ಭಾಗಿಯಾಗಿದ್ದರು.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ

Exit mobile version