ಅಂಕೋಲಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಕೋಲಾ ತಾಲೂಕಿನ ಬೆಲೇಕೇರಿ ವಲಯದ ಬಾವಿಕೇರಿ ಕಾರ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಾವಿಕೇರಿ ಶ್ರೀ ಕಾನಬಿರ ದೇವಸ್ಥಾನದ ಆವರಣದಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಗತಿ ಬಂಧು ಸ್ವ-ಸಹಾಯ ಸಂಘದ ಸದಸ್ಯರಿಗೆ ಪರಿಸರದ ಜಾಗೃತಿಯನ್ನು ಮೂಡಿಸಲಾಯಿತು.
ಈ ವಿಶ್ವದಲ್ಲಿ ಮನುಷ್ಯನಂತೆ ಪ್ರಾಣಿ ಪಕ್ಷಿ ಮತ್ತಿತರ ಜೀವ ಜಂತುಗಳಿದ್ದು, ಇಲ್ಲಿನ ಕಾಡು- ಮರಗಳು, ಬೆಟ್ಟ-ಗುಡ್ಡ ,ಗಾಳಿ – ನೀರು, ಆಕಾಶ, ಪ್ರತಿ ಕಣ ಕಣವೂ ಪರಿಸರ ಎನ್ನಿಸುತ್ತದೆ. ಪರಿಸರವನ್ನು ಉಳಿಸಬೇಕಾದರೆ ನಾವೆಲ್ಲರೂ ಕನಿಷ್ಟ ಒಂದೊಂದು ಗಿಡಗಳನ್ನು ನೆಟ್ಟು ಅವುಗಳನ್ನು ಉಳಿಸಿ ಬೆಳೆಸಬೇಕಾಗಿದೆ.
ಮುಂದಿನ ಪೀಳಿಗೆಗೆ ಹಸಿರು ಪರಿಸರ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಾಲೂಕಿನ ಯೋಜನಾಧಿಕಾರಿಗಳು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮದಲ್ಲಿ ಸರ್ವ ಸದಸ್ಯರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ತಾಲೂಕಿನ ಯೋಜನಾಧಿಕಾರಿಗಳು ವಲಯದ ಮೇಲ್ವಿಚಾರಕರು ಕೃಷಿ ಅಧಿಕಾರಿ, ಸೇವಾ ಪ್ರತಿನಿಧಿ ಮತ್ತು ಸಿ ಎಸ್ ಸಿ ಸೇವಾದಾರರು ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ