Important
Trending

ಗಾಳಿ ಮಳೆಗೆ ಹಾರಿಹೋದ ಹೊಟೇಲ್ ಮೇಲ್ಛಾವಣಿ: ಸ್ವಲ್ಪದರಲ್ಲೇ ತಪ್ಪಿತು ಅನಾಹುತ

ಭಟ್ಕಳ: ತಾಲೂಕಿನ ಗೊರಟೆ ಗಡಿಭಾಗದಲ್ಲಿ ಬೀಸಿದ ಬಾರಿ ಸುಳಿಗಾಳಿಯಿಂದಾಗಿ ಶಿರೂರಿನ ಎನ್ ಎಚ್ 66 ರ ಪಕ್ಕದಲ್ಲಿದ್ದ ಸಹರಾ ಹೊಟೇಲ್ ಮೇಲ್ಚಾವಣಿ ಹಾರಿ ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಳಿಗ್ಗಿನ ಸಮಯದಲ್ಲಿ ಹತ್ತಾರು ಕೆಲಸಗಾರರು ಅಡಿಗೆ ಕೋಣೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ ಬೀಸಿದೆ.

ಗಾಳಿಯ ರಭಸಕ್ಕೆ ಅಡುಗೆ ಕೋಣೆ ಹೊರತುಪಡಿಸಿ ಹೊಟೇಲ್ ಕ್ಯಾಬಿನ್ ಸೇರಿದಂತೆ ಹೊಟೇಲ್ ನ ಸಂಪೂರ್ಣ ಮೇಲ್ಚಾವಣಿ ಹಾರಿ ಎದುರುಗಡೆಯ ವಿದ್ಯುತ್ ವೈರ್ ಗೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ರಸ್ತೆಯ ಬದಿಗಿರುವ ಎರಡು ವಿದ್ಯುತ್ ಕಂಬಗಳು ಸೇರಿದಂತೆ ಮರವೊಂದು ಮುರಿದುಬಿದ್ದಿದೆ.

ಸೀಟಿನ ಮೇಲ್ಚಾವಣಿ ಹಾರಿಹೋಗುವಾಗ ರಸ್ತೆಯ ಪಕ್ಕದ ವಿದ್ಯುತ್ ಲೈನ್ ಗಳು ಅಡ್ಡಲಾದ ಕಾರಣದಿಂದ ಸಂಪೂರ್ಣ ಛಾವಣಿ ವಿದ್ಯುತ್ ಲೈನ್ ಗಳಿಗೆ ಸಿಕ್ಕಿಹಾಕಿಗೊಂಡು ಮುಂದೆ ರಸ್ತೆಯವರೆಗೂ ಹಾರಿ ಉಂಟಾಗಬಹುದಾದ ಸಂಭವನಿಯ ಅನಾಹುತ ತಪ್ಪಿದಂತಾಗಿದೆ. ಘಟನೆ ಸಂಭವಿಸುವಾಗ ಹೊಟೇಲ್ ಕೆಲಸದ ಮಹಿಳೆಯೊರ್ವಳು ಹೊಟೇಲ್ ಎದುರುಗಡೆ ನಿಂತಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆಯಿಂದಾಗಿ ಹೊಟೆಲ್ ನ ಎಸಿ, ಕ್ಯಾಬಿನ್, ಪಿಒಪಿ, ಟೇಬಲ್ ಗಳು ಮರಿದು ಬಿದ್ದಿದ್ದು ಇದರಿಂದಾಗಿ ಮಾಲಕರಿಗೆ ಅಪಾರ ನಷ್ಟ ಉಂಟಾಗಿದೆ.

ಈಶ್ವರ್ ನಾಯ್ಕ, ವಿಸ್ಮಯ ನ್ಯೂಸ್ ಭಟ್ಕಳ

Back to top button