Important
Trending

ಗುಡ್ಡ ಕುಸಿತ, ಧರೆಗುರುಳಿದ ಮರ: ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಬಂದ್

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿ ಹತ್ತಿರದ ವರ್ನಕೇರಿ ಹತ್ತಿರ ಗುಡ್ಡಕುಸಿತವಾಗಿ ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ವಾರದ ಹಿಂದೆ ಇದೆ ಸ್ಥಳದ ಹತ್ತಿರದಲ್ಲೆ ಗುಡ್ಡ ಕುಸಿತ ಉಂಟಾಗಿ, ದೊಡ್ಡ ಬಂಡೆ ಉರುಳಿ ಬಿದ್ದಿತ್ತು.

ಇಂದು ಗುಡ್ಡದ ಜೊತೆಗೆ ಮರವು ಕೂಡ ಬಿದ್ದಿರುವುದು ವಾಹನ ಸಂಚಾರ ಸ್ಥಗಿತಗೊಳಿಸುವಂತಾಗಿದೆ.
ರಸ್ತೆಗೆ ಅಡ್ಡ ಬಿದ್ದಿರುವ ಮರ ತೆರವುಗೊಳಿಸಿದ ತಕ್ಷಣ ರಸ್ತೆ ಸಂಚಾರ ಪ್ರಾರಂಭಿಸಬಹುದಾಗಿದ್ದು, ಒಂದೆರಡು ಗಂಟೆಯ ನಂತರ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ.

ವಿಸ್ಮಯ ನ್ಯೂಸ್ ವಿವೇಕ್ ಶೇಟ್ ಹೊನ್ನಾವರ

Back to top button